ಅಕ್ಕನ ಮಗ ಚಂದ್ರು ಲಾಂಚ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೇದಿಕೆ ಸಿದ್ದಪಡಿಸುತ್ತಿದ್ದಾರೆ.
ತಮ್ಮದೇ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಕ್ಕನ ಮಗನ್ನು ಲಾಂಚ್ ಮಾಡುತ್ತಿದ್ದಾರೆ. ನವಗ್ರಹ ಹಾಗೂ ಸಾರಥಿ ಸೂತ್ರಧಾರಿ ದಿನಕರ್ ಚಂದ್ರುಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸುರೇಶ್ ಬಾಬು ಈ ಸಿನಿಮಾಗೆ ಫಂಡಿಂಗ್ ಮಾಡ್ತಿದ್ದಾರೆ. ಸುರೇಶ್ ಅವರ ಅನನ್ಯ ಹಾಗೂ ಐಶ್ವರ್ಯಾ ಕ್ರಿಯೇಷನ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣವಾಗಲಿದೆ.
ತೂಗುದೀಪ ಬ್ಯಾನರ್ ನಡಿ ತೆರೆಗೆ ಬಂದಿರುವ ನವಗ್ರಹ, ಜೊತೆಜೊತೆಯಲಿ, ಬುಲ್ ಬುಲ್ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಈ ಬ್ಯಾನರ್ ನಡಿ ನಟಿಸಿದ್ದ ಲವ್ಲಿಸ್ಟಾರ್ ಪ್ರೇಮ್, ರಚಿತಾ ರಾಮ್ ತಮ್ಮದೇ ಸ್ಟಾರ್ ಗಿರಿ ಪಡೆದಿದ್ದಾರೆ.
ಏನು ಸಾಧನೆ ಮಾಡದ ಅಕ್ಕನ ಮಗ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ದರ್ಶನ್ ಮನಸ್ಸಿಗೆ ನೋವು ಮಾಡಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಡೆವಿಲ್ ಸಿನಿಮಾದಲ್ಲಿ ಚಂದ್ರುಗೇ ಮೀಸಲಿದ್ದ ಪಾತ್ರದಿಂದ ದಚ್ಚು ಹೊರಗಿಟ್ಟು ಫ್ಯಾನ್ಸ್ ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇತ್ತೀಚೆಗೆ ಡೆವಿಲ್ ನಲ್ಲಿ ಮಗನಿಗೆ ಚಾನ್ಸ್ ಕೊಟ್ಟಿದ್ದು ಭಾರೀ ಸುದ್ದಿಯಾಗಿತ್ತು.





Be the first to comment