ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತಮ್ಮ ಸಿನಿಮಾ ‘ಡೆವಿಲ್’ ಶೂಟಿಂಗ್‌ಗಾಗಿ ವಿದೇಶ ಪ್ರವಾಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೊಸ ದಿನಾಂಕಕ್ಕೆ ಕೋರ್ಟ್ ಅನುಮತಿ ನೀಡಿದೆ.
ದರ್ಶನ್ ಅವರ ಪರವಾಗಿ ವಕೀಲರು 57ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ 11 ರಿಂದ 30ರವರೆಗೆ ಥಾಯ್ಲೆಂಡ್‌ಗೆ ತೆರಳಲು ಅನುಮತಿ ಕೋರಲಾಗಿದೆ. ಈ ಮೊದಲು ಜುಲೈ 1 ರಿಂದ 25ರವರೆಗೆ ದುಬೈ ಹಾಗೂ ಯುರೋಪ್ ಪ್ರವಾಸಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಆದರೆ ಇಸ್ರೇಲ್-ಇರಾನ್ ಯುದ್ಧದ ವಾತಾವರಣ ಕಾರಣದಿಂದಾಗಿ ಶೂಟಿಂಗ್ ಕೈಬಿಡಲಾಗಿತ್ತು.
‘ದಿ ಡೆವಿಲ್’ ಚಿತ್ರದಲ್ಲಿ ದರ್ಶನ್ ‘ಮುಖ್ಯಮಂತ್ರಿ’ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕರುನಾಡ ಪ್ರಜಾ ಪಕ್ಷ’ದಿಂದ ಆಯ್ಕೆಯಾಗಿರುವ ಮುಖ್ಯಮಂತ್ರಿ ಧನುಷ್ ರಾಜಶೇಖರ್ ಆಗಿ ದರ್ಶನ್ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಸೆಟ್‌ನಿಂದ ಒಂದು ಫೋಟೋ ಲೀಕ್ ಆಗಿದೆ. ಲೀಕ್ ಆದ ಚಿತ್ರದಲ್ಲಿ ದರ್ಶನ್ ಫೋಟೋ ಇರುವ ಕಟೌಟ್ ಹಾಕಲಾಗಿದ್ದು, ಅದರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂದು ಬರೆಯಲಾಗಿದೆ.
ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ ಸಿನಿಮಾ ‘ದಿ ಡೆವಿಲ್’ ಇಷ್ಟೊತ್ತಿಗಾಗಲೇ ರಿಲೀಸ್ ಆಗಿರಬೇಕಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಿಲುಕಿದ್ದರಿಂದ ಚಿತ್ರೀಕರಣ ತಡವಾಗಿದೆ.
—-





Be the first to comment