ಕೇಂದ್ರ ಸಚಿವರ ಚಿತ್ರಕ್ಕೆ ಸಂಕಷ್ಟ

ಕೇಂದ್ರ ಸಚಿವ ಸುರೇಶ್ ಗೋಪಿ ಅವರ ‘ಜಾನಕಿ vs ಸ್ಟೇಟ್ ಆಫ್ ಕೇರಳ‘ ಚಿತ್ರದ   ಬಿಡುಗಡೆಯನ್ನು ಸೆನ್ಸಾರ್ ಮಂಡಳಿಯ ಆಕ್ಷೇಪಣೆಗಳಿಂದಾಗಿ ಮುಂದೂಡಲಾಗಿದೆ.

ಪ್ರವೀಣ್ ನಾರಾಯಣನ್ ನಿರ್ದೇಶನದ ಈ ಚಿತ್ರವನ್ನು ಕಾಸ್ಮೋಸ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿದೆ. ಮಲಯಾಳಂ ನಟಿ ಅನುಪಮಾ ಪರಮೇಶ್ವರನ್,  ಕೇಂದ್ರ ಸಚಿವ ಸುರೇಶ್ ಗೋಪಿ, ಶ್ರುತಿ ರಾಮಚಂದ್ರನ್ ಮತ್ತು ಮಾಧವ್ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 27 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ  ಸೆನ್ಸಾರ್ ಆಕ್ಷೇಪಣೆಗಳಿಂದಾಗಿ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಿರ್ದೇಶಕ ಪ್ರವೀಣ್ ನಾರಾಯಣನ್ ದೃಢಪಡಿಸಿದ್ದಾರೆ.

ಮುಂಬೈ ಸೆನ್ಸಾರ್ ಮಂಡಳಿ ‘ಜಾನಕಿ vs ಸ್ಟೇಟ್ ಆಫ್ ಕೇರಳ‘ ಚಿತ್ರದಲ್ಲಿ ಬಲಿಪಶುವಿನ ಪಾತ್ರಕ್ಕೆ ಜಾನಕಿ ಎಂಬ ದೈವಿಕ ಹೆಸರನ್ನು ಇಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಚಿತ್ರದಲ್ಲಿ ಜಾನಕಿ ಎಂಬ ಮಹಿಳೆಯನ್ನು ಅತ್ಯಾಚಾರ ಸಂತ್ರಸ್ತೆಯಾಗಿ ತೋರಿಸಲಾಗುತ್ತದೆ. ಸೆನ್ಸಾರ್ ಮಂಡಳಿಯು ‘ಜಾನಕಿ‘ ಸೀತಾ ದೇವಿಯ ಮತ್ತೊಂದು ಹೆಸರಾಗಿರುವುದರಿಂದ,  ಆ ಹೆಸರನ್ನು ಅತ್ಯಾಚಾರ ಸಂತ್ರಸ್ತೆಗೆ ಇಡಬಾರದು ಎಂದು ಹೇಳಿದೆ ಎಂದು ವರದಿಯಾಗಿದೆ.

ತಿರುವನಂತಪುರದ ಪ್ರಾದೇಶಿಕ ಸೆನ್ಸಾರ್ ಕಚೇರಿ ಚಿತ್ರಕ್ಕೆ ಯು/ ಎ ಪ್ರಮಾಣಪತ್ರ ನೀಡಿದ ನಂತರ   ಸಮಸ್ಯೆ ಉದ್ಭವಿಸಿದೆ.  ಆದರೆ ಮುಂಬೈನಲ್ಲಿರುವ ಪ್ರಧಾನ ಕಚೇರಿ ಶೀರ್ಷಿಕೆಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿದೆ.. ಹೆಸರನ್ನು ಬದಲಾಯಿಸಬೇಕಾದರೆ ಚಿತ್ರದ ಹಲವು ಸಂಭಾಷಣೆ  ಬದಲಾಯಿಸಬೇಕಾಗುತ್ತದೆ ಎಂದು ನಿರ್ದೇಶಕರು ಚಿಂತಿತರಾಗಿದ್ದಾರೆ.

ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ ಪ್ರಧಾನ ಕಾರ್ಯದರ್ಶಿ ಬಿ. ಉನ್ನಿಕೃಷ್ಣನ್  ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಟೀಕಿಸಿದ್ದಾರೆ. ‘ದೇವರುಗಳ ಹೆಸರಿನ ಪಾತ್ರಗಳ ಮೇಲೆ  ನಿರ್ಬಂಧಗಳನ್ನು ಹೇರುವುದು ಅಸಂಬದ್ಧ ಮತ್ತು ಕಲಾತ್ಮಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಅಂತಹ ನಿರ್ಬಂಧಗಳು ಜಾರಿಯಲ್ಲಿದ್ದರೆ ಹಿಂದೂ ಧರ್ಮಕ್ಕೆ ಸೇರಿದ ಪಾತ್ರಗಳಿಗೆ ಹೆಸರುಗಳನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!