ವಾಣಿಜ್ಯ ಮಂಡಳಿ

ರಚಿತಾ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ

‘ಸಂಜು ವೆಡ್ಸ್ ಗೀತಾ 2’  ಸಿನಿಮಾ ತಂಡದ ಪ್ರಚಾರಕ್ಕೆ ಬೆಂಬಲ ನೀಡದ ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಗರಂ ಆಗಿದ್ದಾರೆ.

‘ಎಷ್ಟು ಬಾರಿ ಸಿನಿಮಾ ಬಿಡುಗಡೆ ಆದರೂ ಕಲಾವಿದರು ಪ್ರಚಾರಕ್ಕೆ ಬಂದು ಬೆಂಬಲ ನೀಡಲೇಬೇಕು.  ಸಿನಿಮಾ ರಂಗದಿಂದಲೇ ನೀವು ಹಣ, ಹೆಸರು ಗಳಿಸಿದ್ದೀರಿ. ವಾಣಿಜ್ಯ ಮಂಡಳಿಗಾದರೂ ಸ್ಪಂದಿಸಬೇಕು. ಯಾರೋ ಪಿಎಗಳಿಂದ ಮಾತನಾಡಿಸೋದಲ್ಲ’ ಎಂದು ನರಸಿಂಹಲು ಅವರು ಹೇಳಿದ್ದಾರೆ.

‘ನಾನು ಕ್ಷಮೆ ಕೇಳುವಂತೆ ರಚಿತಾ ರಾಮ್ ಅವರಿಗೆ ಹೇಳಿಲ್ಲ. ಸಿನಿಮಾ ತಂಡದ ಜೊತೆಗೆ ಅವರು ಸ್ಪಂದನೆ ಮಾಡುವುದು ಬಹಳ ಮುಖ್ಯ. ಸಿನಿಮಾ ತಂಡವನ್ನು ಬೆಂಬಲಿಸುವುದು ನಮ್ಮ ಕೆಲಸವಾಗಬೇಕು’ ಎಂದು ಅವರು ಹೇಳಿದ್ದಾರೆ.

‘ಸಂಜು ವೆಡ್ಸ್ ಗೀತಾ 2’  ಸಿನಿಮಾ ತಂಡದ ಪ್ರಚಾರಕ್ಕೆ   ಬೆಂಬಲ ನೀಡದ ರಚಿತಾ ರಾಮ್ ಮೇಲೆ ನಿರ್ದೇಶಕ ನಾಗಶೇಖರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ  ಮಂಡಳಿಗೆ  ದೂರು ನೀಡಿದ್ದರು. ರಚಿತಾ ರಾಮ್ 3 ದಿನ ಬಿಡುವು ಮಾಡಿಕೊಂಡು ನಮ್ಮ ಸಿನಿಮಾದ ಪ್ರಚಾರಕ್ಕೆ ಬರಬಹುದಿತ್ತು ಎಂದು ನಾಗಶೇಖರ್ ಹೇಳಿದ್ದರು.

ಆದರೆ ರಚಿತಾ ರಾಮ್ ಅವರನ್ನು ವಾಣಿಜ್ಯ ಮಂಡಳಿಗೆ ಕರೆಸಲು ಸಾಧ್ಯವಾಗಿಲ್ಲ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!