ಅವನಿರಬೇಕಿತ್ತು

‘ಅವನಿರಬೇಕಿತ್ತು’ ಜೂನ್ 27ರಂದು ಬಿಡುಗಡೆ

ಭರತ್ ಮತ್ತು ಸೌಮ್ಯಾ ಮುಖ್ಯ ಭೂಮಿಕೆ ನಿಭಾಯಿಸಿರುವ  ‘ಅವನಿರಬೇಕಿತ್ತು’ ಸಿನಿಮಾ  ರಾಜ್ಯಾದ್ಯಂತ ಜೂನ್ 27ರಂದು  ಬಿಡುಗಡೆ ಆಗಲಿದೆ.

‘ಅವನಿರಬೇಕಿತ್ತು’ ಸಿನಿಮಾದ  ಟ್ರೇಲರ್ ನೋಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಸಿನಿಮಾ ಟ್ರೇಲರ್ ಆರ್ಗ್ಯಾನಿಕ್ ಆಗಿ ಉತ್ತಮ ವೀವ್ಸ್ ಪಡೆದುಕೊಳ್ಳುತ್ತಿದೆ. ಇದು ಚಿತ್ರತಂಡದ ಭರವಸೆಯನ್ನು ಹೆಚ್ಚು ಮಾಡಿದೆ. ಟ್ರೇಲರ್ ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ  ಅಶೋಕ್ ಸಾಮ್ರಾಟ್ ಅವರು ‘ಅವನಿರಬೇಕಿತ್ತು’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡಿರುವ ಅಶೋಕ್ ಸಾಮ್ರಾಟ್ ಅವರು ಗುಣ ಮಟ್ಟದ ಮೇಕಿಂಗ್ ಮೂಲಕ ಜನರನ್ನು ಸೆಳೆಯಲಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ.

ಅಶೋಕ್ ಸಾಮ್ರಾಟ್ ಅವರ ಸ್ನೇಹಿತ ಮುರಳಿ ಬಿ.ಟಿ. ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಅವರ ಶಿಷ್ಯ ಲೋಕಿ ತವಸ್ಯಾ  ಸಂಗೀತ ಸಂಯೋಜಿಸಿದ್ದಾರೆ. ದೇವರಾಜ್ ಪೂಜಾರಿ ಅವರು ಛಾಯಾಗ್ರಹಣ ಮಾಡಿದ್ದಾರೆ.

‘ಅಂದಕಾಲತ್ತಿಲ್ ಇಂದ ಕಾಲತ್ತಿಲ್’ ಹಾಡಿನಿಂದ,  ‘ಓ ಹೃದಯ’ ಸಾಂಗ್​ನಿಂದ ‘ಅವನಿರಬೇಕಿತ್ತು’ ಸಿನಿಮಾದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!