ಮಾತಿನಮನೆಯಲ್ಲಿ `ನೋಟಗಾರ’

ಬೆಳ್ಳುಡಿ ಸಿನಿಮಾಸ್ ಲಾಂಛಾನದಲ್ಲಿ ಪರಮೇಶಿ ಎ.ಹೆಚ್ ಹಾಗೂ ಹರ್ಷ ಬೆಳ್ಳುಡಿ ಅವರು ನಿರ್ಮಿಸುತ್ತಿರುವ `ನೋಟಗಾರ` ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಚಿತ್ರಕ್ಕೆ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು ಮತ್ತು ತೀರ್ಥಹಳ್ಳಿಯಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಹಾಡುಗಳ ಚಿತ್ರೀಕರಣ ಬಾಕಿಯಿದೆ. ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.
ಮಂಜು ಹೆದ್ದೂರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕನಾಗಿ ಸಿದ್ದು ಮೂಲಿಮನಿ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್ ಈ ಚಿತ್ರದ ನಾಯಿಕಿ. ಮೋಹನ್ ಜುನೇಜ, ಪ್ರಕಾಶ್ ತುಮಿನಾಡು, ನಾಗೇಶ್ ಮಯ್ಯ, ಪೃಥ್ವಿರಾಜ್, ವಿನಯ್ ಕಣಿವೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೆಶಕ ಮಂಜು ಹೆದ್ದೂರ್ ಕೂಡ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ.
ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಭರ್ಜರಿ ಚೇತನ್ ಕುಮಾರ್ ಅವರು ಬರೆದಿರುವ ಈ ಚಿತ್ರದ ಹಾಡುಗಳಿಗೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣ ವಿನಯ್ ಕುಮಾರ್ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ವಾಗೀಶ್ ಹೆಚ್.ಪಿ.

This Article Has 1 Comment
  1. Pingback: CC Carpet Cleaning in Hesperia CA.

Leave a Reply

Your email address will not be published. Required fields are marked *

Translate »
error: Content is protected !!