‘ಆ್ಯಂಟಗೊನಿ ಶೆಟ್ಟಿ’ ಯಾದ ರಿಷಬ್ ಶೆಟ್ಟಿ

ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಲೇ ಬರುತ್ತಿರುವ ನಟ, ನಿರ್ದೇಶಕ, ನಿರ್ಮಾಪಕ ರಿಷಭ್‍ಶೆಟ್ಟಿ ಈಗ ಸಮರ್ಥ ಕಡಕೋಳ ಅವರಿಗೆ ನಿರ್ದೇಶಕನಾಗುವ ಅವಕಾಶ ಕಲ್ಪಿಸಿದ್ದಾರೆ.
ಬೆಲ್‍ಬಾಟಂನ ಸಕ್ಸಸ್‍ನ ಸಂತಸದಲ್ಲಿರುವ ರಿಷಭ್‍ಶೆಟ್ಟಿ ಈಗ ಆ್ಯಂಟಗೊನಿ ಶೆಟ್ಟಿ ಎಂಬ ಚಿತ್ರದ ನಾಯಕನಾಗಿದ್ದು ಸ್ವತಃ ನಿರ್ದೇಶಕರೇ ಆಗಿದ್ದರೂ ಕೂಡ ಸಮರ್ಥ್ ಅವರು ಹೇಳಿದ ಕಥೆಗೆ ಮನಸೋತು ಅವರಿಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿ ತಾವು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ರಿಷಭ್‍ಶೆಟ್ಟಿ ನೀಡಿದ ಪ್ರೋತ್ಸಾಹದಿಂದ ಸಮರ್ಥ್ ಕಡಕೋಳು ಅವರು ಈಗ ಚಿತ್ರಕತೆ, ಸಂಭಾಷಣೆ ಬರೆಯುವುದರಲ್ಲಿ ತಲ್ಲೀನರಾಗಿದ್ದಾರೆ. ಆ್ಯಂಟಗೊನಿ ಶೆಟ್ಟಿ ಚಿತ್ರದ ಟೈಟಲ್ಲೇ ತುಂಬಾ ಕ್ಯಾಚಿಯಾಗಿದ್ದು, ಇದು ಬೇರೆ ಚಿತ್ರಗಳಿಗಿಂತ ಡಿಫರೆಂಟ್ ಆಗಿದೆ. ಜರ್ನಿಯಲ್ಲಿ ಸಾಗುವ ಕತೆಯಿದ್ದು, 2004 ರಿಂದ 2019ರ ಕಾಲಘಟ್ಟದಲ್ಲಿ ನಡೆಯುವ ಕತೆಯಾಗಿದ್ದು ಹುಬ್ಬಳ್ಳಿಯಿಂದ ಮುಂಬೈವರೆಗೂ ಕಥೆ ಸಾಗಲಿದೆ.

ಬೆಲ್‍ಬಾಟಂನಲ್ಲಿ ಪತ್ತೇದಾರಿ ಪಾತ್ರದಲ್ಲಿ ಗಮನ ಸೆಳೆದಿದ್ದ ರಿಷಭ್‍ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊನ್ನೆ ಬಿಡುಗಡೆಯಾದ ಈ ಚಿತ್ರದ ಮೊದಲ ಲುಕ್‍ನಲ್ಲಿ ರೈಲಿನಲ್ಲಿ ಖಾಕಿ ಬಟ್ಟೆ ತೊಟ್ಟು ಬೆನ್ನು ತೋರಿಸಿ ನಿಂತುಕೊಂಡಿರುವ ಪೋಜ್ ಇರುವ ಪೋಸ್ಟರ್ ಈಗಾಗಲೇ ಕುತೂಹಲ ಮೂಡಿಸಿದೆ. ನಾಯಕಿ, ಉಳಿದ ಕಲಾವಿದರು ಹಾಗೂ ತಂತ್ರಜ್ಞರ ತಲಾಶೆ ನಡೆಯುತ್ತಿದೆ.

ರಿಷಭ್‍ಶೆಟ್ಟಿಯೊಂದಿಗೆ ಶ್ರೀಪಾದ್‍ಜೋಷಿಯವರು ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ರಿಷಭ್ ಈಗ ನಾಥೂರಾಮ್ ಚಿತ್ರದಲ್ಲಿ ಫುಲ್‍ಬ್ಯುಜಿಯಾಗಿದ್ದು, ಜನವರಿಯಲ್ಲಿ ಆ್ಯಂಟಗೊನಿ ಶೆಟ್ಟಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ನಾಯಕನಟನಾಗಿ ಬಣ್ಣ ಹಚ್ಚಿದ ಮೊದಲ ಚಿತ್ರದಲ್ಲಿ ಸೆಂಚುರಿ ಬಾರಿಸಿರುವ ರಿಷಭ್‍ಶೆಟ್ಟಿ ಆ್ಯಂಟಗೊನಿ ಶೆಟ್ಟಿಯಾಗಿ ಯಾವ ರೀತಿಯ ಮೋಡಿ ಮಾಡಲಿದ್ದಾರೋ.

This Article Has 1 Comment
  1. Pingback: Tree removal Fair Bluff

Leave a Reply

Your email address will not be published. Required fields are marked *

Translate »
error: Content is protected !!