ಅಶ್ವಿನಿ ಹಾಗೂ ಪ್ರಕೃತಿ ಬನವಾಸಿ ರಚಿಸಿರುವ ನಟ ಪುನೀತ್ ರಾಜ್ ಕುಮಾರ್ ಜೀವನ ಚರಿತ್ರೆ ಪುಸ್ತಕ ‘ಅಪ್ಪು’ ಶೀಘ್ರ ಹೊರಬರಲಿದೆ.
ಪುನೀತ್ ರಾಜ್ ಕುಮಾರ್ 50ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಅಭಿಮಾನಿಗಳಿಗೆ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ. ‘ಅಪ್ಪು’ ಜೀವನ ಚರಿತ್ರೆ ಶೀಘ್ರದಲ್ಲಿಯೇ ಪುಸ್ತಕ ರೂಪದಲ್ಲಿ ಹೊರಬರಲಿದೆ. ಅಶ್ವಿನಿ ಹಾಗೂ ಪ್ರಕೃತಿ ಬನವಾಸಿ ರಚಿಸಿರುವ ಪುಸ್ತಕದ ಮುಖಪುಟ ಬಿಡುಗಡೆಯಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಪುಸ್ತಕ ರಚಿಸಲಾಗಿದೆ.
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಸಂದರ್ಭದಲ್ಲಿ ಅಶ್ವಿನಿ ಹಾಗೂ ಮಕ್ಕಳು ಪುಸ್ತಕದ ಮುಖಪುಟ ಹಿಡಿದು ಪೋಸ್ ಕೊಟ್ಟಿದ್ದಾರೆ. ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್ನ ಕವರ್ ಪೇಜ್ ಮಾಡಲಾಗಿದೆ. ಆಪ್ತರನ್ನು, ಕುಟುಂಬದವರಿಂದ ಮಾಹಿತಿ ಕಲೆ ಹಾಕಿ ಪುಸ್ತಕ ಬರೆಯಲಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ‘ಅಪ್ಪು’ ಪುಸ್ತಕ ರಿಲೀಸ್ ಆಗುವ ಸಾಧ್ಯತೆಯಿದೆ. ಈ ಪುಸ್ತಕದಲ್ಲಿ ಯಾವೆಲ್ಲ ವಿಚಾರಗಳು ಇರಲಿವೆ ಎನ್ನುವ ಕುತೂಹಲ ಮೂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, ಪ್ರಸ್ತುತಪಡಿಸುತ್ತಿದ್ದೇವೆ ‘ಅಪ್ಪು’ – ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲಿ… ಎಂದು ಬರೆದುಕೊಂಡಿದ್ದಾರೆ.

Be the first to comment