ನೆಟ್​ಫ್ಲಿಕ್ಸ್​ ವೆಬ್ ಸರಣಿ ವಿರುದ್ಧ ಆಕ್ರೋಶ

1999ರಲ್ಲಿ ನಡೆದ ವಿಮಾನ ಅಪಹರಣದ ಕತೆ ಹೊಂದಿರುವ ‘ಐಸಿ 814’ ವೆಬ್ ಸರಣಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಪಹರಣ ಮಾಡಿದ ದುರುಳರನ್ನು ವೈಭವೀಕರಣಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವೆಬ್ ಸರಣಿಯಲ್ಲಿ ಅಪಹರಣಕಾರರನ್ನು ವೈಭವೀಕರಣ ಮಾಡಲಾಗಿದೆ. ಅವರೆಡೆ ಪ್ರೇಕ್ಷಕನಿಗೆ ಸಿಂಪತಿ ಮೂಡುವಂತೆ ನಿರೂಪಣೆ ಮಾಡಲಾಗಿದೆ. ಅಪಹರಣಕಾರರ ಪಾತ್ರಗಳಿಗೆ ಶಂಕರ್ ಮತ್ತು ಭೋಲಾ ಎಂಬ ನಕಲಿ ಹೆಸರುಗಳನ್ನು (ಕೋಡ್​ನೇಮ್) ಗಳನ್ನು ಬಳಸಲಾಗಿದೆ. ವೆಬ್ ಸರಣಿಯ ಯಾವುದೇ ಹಂತದಲ್ಲಿಯೂ ಅವರ ನಿಜವಾದ ಹೆಸರನ್ನು ಹೇಳಲಾಗಿಲ್ಲ. ವಿಮಾನ ಅಪಹರಣ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್​ಐ ನದ್ದು ಯಾವುದೇ ತಪ್ಪಿಲ್ಲ ಎಂಬಂತೆ ತೋರಿಸಲಾಗಿದೆ.

ಅಪಹರಣಕಾರರೊಟ್ಟಿಗೆ ಸಂಧಾನಕ್ಕೆ ಹೋಗಿದ್ದ ಅಜಿತ್ ಧೋವಲ್ ಪಾತ್ರವನ್ನು ಹಾಸ್ಯದ ಪಾತ್ರದಂತೆ ತೋರಿಸಲಾಗಿದೆ. ಅಪಹರಣಕಾರರೊಟ್ಟಿಗಿನ ಸಂಧಾನ ಸಭೆಯನ್ನೂ ಹಾಸ್ಯದ ದೃಶ್ಯದಂತೆ ತೋರಿಸಲಾಗಿದೆ. ಸಂಧಾನಕ್ಕೆ ತೆರಳಿದಾಗಿನ ಚಿತ್ರಗಳು ಲಭ್ಯವಿದ್ದರೂ   ಅವನ್ನು ಬೇಕೆಂದೇ ಬಳಸಿಕೊಳ್ಳಲಾಗಿಲ್ಲ.  ಭಯೋತ್ಪಾದಕರ ಪರವಾಗಿ ಕೆಲವು ಸಂಭಾಷಣೆಗಳಿವೆ. ಭಯೋತ್ಪಾದಕರನ್ನು ಕ್ರಾಂತಿಕಾರಿಗಳಂತೆ ತೋರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ವೆಬ್ ಸರಣಿ ಬಗ್ಗೆ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ಕೇಂದ್ರ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲವಯ ನೆಟ್​ಫ್ಲಿಕ್ಸ್​ ಇಂಡಿಯಾಗೆ ನೊಟೀಸ್ ನೀಡಿದೆ. ದೆಹಲಿ ನ್ಯಾಯಾಲಯದಲ್ಲಿ ವೆಬ್ ಸರಣಿಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ಅನುಭವ್ ಸಿಂಹ ನಿರ್ದೇಶಿಸಿ, ವಿಜಯ್ ವರ್ಮಾ, ನಸಿರುದ್ದೀನ್ ಶಾ ಇತರರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಐಸಿ 814’ 1999 ರಲ್ಲಿ ಅಪಹರಣಕ್ಕೆ ಒಳಗಾಗಿದ್ದ IC 814 ವಿಮಾನ ಅಪಹರಣದ ಕತೆಯನ್ನು ಒಳಗೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!