‘ಕಾಂತಾರ 1’ ಶೂಟಿಂಗ್ ಶುರು

ಮಳೆ  ಕಡಿಮೆಯಾದ ಹಿನ್ನೆಲೆಯಲ್ಲಿ ‘ಕಾಂತಾರ 1’ ಸಿನಿಮಾದ ಶೂಟಿಂಗ್ ಮತ್ತೆ  ಆರಂಭವಾಗಿದೆ.

ಡಬಿಡದೆ ಸುರಿಯುತ್ತಿದ್ದ  ಮಳೆ ಹಿನ್ನೆಲೆಯಲ್ಲಿ ಕಾಂತಾರ 1 ಸಿನಿಮಾದ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಮಳೆ  ಕಡಿಮೆಯಾದ ಹಿನ್ನೆಲೆಯಲ್ಲಿ  ರಿಷಬ್ ಶೆಟ್ಟಿ  ಸಿನಿಮಾದ ಶೂಟಿಂಗ್ ಗೆ ಚಾಲನೆ ನೀಡಿದ್ದಾರೆ.

‘ಕಾಂತಾರ’ ಸಿನಿಮಾ ಸಕ್ಸಸ್ ನಂತರ ‘ಕಾಂತಾರ ಚಾಪ್ಟರ್ 1’ ಕೂಡ ಉತ್ತಮ ಕಥೆಯೊಂದಿಗೆ ಅದ್ಧೂರಿಯಾಗಿ ತರಲು ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ‘ಕಾಂತಾರ ಚಾಪ್ಟರ್ 1’ ಸಿನಿಮಾದ ರಿಷಬ್ ಫಸ್ಟ್ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಭಿನ್ನ ಅವತಾರದಲ್ಲಿ ರಿಷಬ್ ಮಿಂಚಿದ್ದರು.  ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

ರಿಷಬ್ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ 1’ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ. ಸಿನಿಮಾ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ತುಳು ನಾಡಿನ ಸಂಸ್ಕೃತಿ ಅನಾವರಣ ಮಾಡಿದ್ದ ‘ಕಾಂತಾರ’ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಕನ್ನಡದ ಬಳಿಕ ಇತರ ಭಾಷೆಗಳಲ್ಲಿ ನಿರ್ಮಾಣಗೊಂಡು ಬಿಡುಗಡೆಯಾಯಿತು. ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಉಳಿದಂತೆ ಸಪ್ತಮಿ ಗೌಡ, ಕಿಶೋರ್, ಅಚ್ಚುತ ಕುಮಾರ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!