‘ಶಾಸ್ತ್ರಿ’ ರೀ-ರಿಲೀಸ್​ ಮಾಡಲು ತಯಾರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಶಾಸ್ತ್ರಿ’ ಸಿನಿಮಾ ಜುಲೈ 12ಕ್ಕೆ ರೀ-ರಿಲೀಸ್​ ಮಾಡಲು  ತಯಾರಿ ನಡೆದಿದೆ.

ವಿತಕರ ವಿ.ಎಂ. ಶಂಕರ್​ ಅವರು ಈ ಸಿನಿಮಾವನ್ನು ರೀ-ರಿಲೀಸ್​ ಮಾಡುತ್ತಿದ್ದಾರೆ.  ಇದು ಸಡನ್​ ಪ್ಲ್ಯಾನ್​ ಅಲ್ಲ. ದರ್ಶನ್​ ಜೈಲಿಗೆ ಹೋಗಿದ್ದಕ್ಕೂ ‘ಶಾಸ್ತ್ರಿ’ ಮರು ಬಿಡುಗಡೆ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಂಕರ್​ ಹೇಳಿದ್ದಾರೆ.

”ಈ ವಾರ ಕನ್ನಡದ ಬೇರೆ ಯಾವ ಸಿನಿಮಾ ಕೂಡ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಚಿತ್ರಮಂದಿರದ ಮಾಲೀಕರು ರೀ-ರಿಲೀಸ್​ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ 25ರಿಂದ 50 ಚಿತ್ರಮಂದಿರಗಳಲ್ಲಿ ‘ಶಾಸ್ತ್ರಿ’ ಸಿನಿಮಾ ಬಿಡುಗಡೆ ಮಾಡುತ್ತೇವೆ. ಗಲಭೆ ಆಗಬಹುದು ಅಂತ ಕೆಲವು ಚಿತ್ರಮಂದಿರದ ಮಾಲಿಕರು ಯೋಚನೆ ಮಾಡುತ್ತಿದ್ದಾರೆ” ಎಂದು ಶಂಕರ್​ ಹೇಳಿದ್ದಾರೆ.

ಶಾಸ್ತ್ರಿ ಚಿತ್ರ 2005ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ಪಿ ಎನ್ ಸತ್ಯ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ದರ್ಶನ್ ಜೊತೆಗೆ ಮಾನ್ಯ, ಬುಲೆಟ್ ಪ್ರಕಾಶ್ ನಟಿಸಿದ್ದರು. ಶಾಸ್ತ್ರಿ ಚಿತ್ರ ಚಿತ್ರ ಮಂದಿರಗಳಲ್ಲಿ ಯಶಸ್ವಿ ಎನಿಸಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!