ಚಿತ್ರ ರಿಲೀಸ್ ಗೆ ‘ ನಾಟ್ ಔಟ್‌ ‘ ತಂಡದ ಮಾಸ್ಟರ್ ಪ್ಲ್ಯಾನ್

ಜುಲೈ 19ರಂದು ‘ನಾಟ್ ಔಟ್‌ ‘ ಸಿನಿಮಾ ರಿಲೀಸ್ ಆಗುತ್ತಿದ್ದು, ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದೆ.

ನಾಟ್ ಔಟ್‌ ಚಿತ್ರತಂಡ, ಅರ್ಧ ಸಿನಿಮಾ ಉಚಿತವಾಗಿ ನೋಡಿ, ಇನ್ನರ್ಧ ಬೇಕಿದ್ರೆ ಟಿಕೆಟ್‌ ಖರೀದಿಸಿ ಎಂದಿದೆ. ಟಿಕೆಟ್ ಖರೀದಿಸಿ ಸಿನಿಮಾ ಚೆನ್ನಾಗಿಲ್ಲ ಎಂದು ಹೊರ ಬಂದು ಬೇಸರ ಮಾಡಿಕೊಳ್ಳುವ ಬದಲು ಫಸ್ಟ್‌ ಹಾಫ್‌ ಸಿನಿಮಾ ನೋಡಿದ ಮೇಲೆ ಇಂಟ್ರೆಸ್ಟಿಂಗ್ ಆಗಿದೆ ಎಂದವರು ಎರಡನೇ ಭಾಗ ನೋಡಲು ಟಿಕೆಟ್‌ ಖರೀದಿಸಿ ಎಂದಿದೆ.

“ಮೊದಲರ್ಧ ಪ್ರೇಕ್ಷಕರು ಉಚಿತವಾಗಿ ಸಿನಿಮಾ ನೋಡಬಹುದು. ನಂತರ ಸೆಕೆಂಡ್ ಹಾಫ್‌ ಸಿನಿಮಾ ನೋಡಬೇಕು ಅನಿಸಿದರೆ ಮಾತ್ರ ಟಿಕೆಟ್ ಕೊಂಡು ನೋಡಬಹುದು. ಪ್ರಮುಖ ಚಿತ್ರಮಂದಿರಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ” ಎಂದು ನಿರ್ದೇಶಕ ಅಂಬರೀಶ್ ಹೇಳಿದ್ದಾರೆ.

ಚಿತ್ರದಲ್ಲಿ ಪೃಥ್ವಿ ಹಾಗೂ ರಚನಾ ಇಂದರ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ವಿ.ರವಿಕುಮಾರ್ ಹಾಗೂ ಶಂಶುದ್ದೀನ್‌ ಎ ಬಂಡವಾಳ ಹಾಕಿದ್ದಾರೆ.

ಇದೊಂದು ಹ್ಯೂಮರ್ ಡಾರ್ಕ್‌ ಕಾಮಿಡಿ ಜಾನರ್‌ನ ಚಿತ್ರವಾಗಿದ್ದು ನಾಯಕ ಆಂಬ್ಯುಲೆನ್ಸ್‌ ಚಾಲಕನಾಗಿ ನಟಿಸಿದ್ದಾರೆ. ರಚನಾ ಇಂದರ್ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಹಾಲೇಶ್ ಅವರ ಛಾಯಾಗ್ರಹಣವಿದೆ. ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ರವಿಶಂಕರ್ ಮತ್ತು ಸಲ್ಮಾನ್ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!