ಸ್ಯಾಂಡಲ್‌ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ಅವರು ಓರ್ವ ನಿರ್ಮಾಪಕನೊಂದಿಗೆ ಲವ್ವಲ್ಲಿ ಬಿದ್ದಿದ್ದು, ಸದ್ಯದಲ್ಲೇ ಅವರು ಮದುವೆಯ ಶುಭ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.
41 ವರ್ಷವಾದರೂ 18 ವರ್ಷದ ಹುಡುಗಿಯರಂತೆ ಕಾಣುವ ರಮ್ಯಾ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬ ಚಿಂತೆ ಅವರ ಅಭಿಮಾನಿಗಳಲ್ಲಿದೆ. ತಮ್ಮ ನೆಚ್ಚಿನ ನಟಿ ರಮ್ಯಾ ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆಯೇ ಹೀಗೊಂದು ಗುಸು ಗುಸು ಸುದ್ದಿ ಸದ್ದು ಮಾಡುತ್ತಿದೆ.
ರಮ್ಯಾ ಅವರು ಬೆಂಗಳೂರು ಮೂಲದ ಖ್ಯಾತ ನಿರ್ಮಾಕನೊಂದಿಗೆ ಲಿವಿಂಗ್ ರಿಲೇಷನ್ ಶಿಪ್ನಲ್ಲಿದ್ದಾರೆ ಎಂಬ ಗಾಸಿಪ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ರಮ್ಯಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಈ ಹಿಂದೆ ರಮ್ಯಾ ಅವರು ಪೋರ್ಚುಗಲ್ ಮೂಲದ ರಫೇಲ್ ನೊಂದಿಗೆ ದುಬೈನಲ್ಲಿ ವಿವಾಹ ಆಗಲಿದ್ದಾರೆ ಎಂದೂ ಗುಸು-ಗುಸು ಹಬ್ಬಿದ್ದು ಹಳೆಯ ವಿಚಾರ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಅವರು ಗೆಳೆಯನ ಜತೆ ಇರುವ ಫೋಟೋವನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
—–
Post Views:
188
Be the first to comment