ಅಕ್ಷಯ್‌ ಕುಮಾರ್‌ ಅಭಿನಯದ ‘ಸರ್ಫಿರಾ’ ಜುಲೈ 12ರಂದು ರಿಲೀಸ್

ಕ್ಷಯ್ ಕುಮಾರ್ ಅಭಿನಯದ ‘ಸರ್ಫಿರಾ’ ಸಿನಿಮಾ ಜುಲೈ 12ರಂದು ಬಿಡುಗಡೆಯಾಗಲಿದೆ.

ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಇದು ಕನ್ನಡಿಗ ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ.

ಸಿನಿಮಾದಲ್ಲಿ ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರೆ. ತಮಿಳಿನ ‘ಸೂರರೈ ಪೋಟ್ರು’ ಸಿನಿಮಾ  ನಿರ್ದೇಶಕ ಸುಧಾ ಕೊಂಗರ ಅವರು ಹಿಂದಿಯಲ್ಲಿ ನಿರ್ದೇಶನ ಮಾಡಿದ್ದಾರೆ.

ತಮಿಳಿನ ಸೂರರೈ ಪೋಟ್ರು ಸಿನಿಮಾದ ರೀಮೇಕ್ ಸಿನಿಮಾ ‘ಸರ್ಫಿರಾ’. ತಮಿಳಿನಲ್ಲಿ ಸೂರ್ಯ ಅತ್ಯುತ್ತಮ ನಟ, ಅಪರ್ಣ ಬಾಲಮುರುಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು. ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಈ ಸಿನಿಮಾ ಹಲವು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು. ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕೆ ಜಿ ವಿ ಪ್ರಕಾಶ್ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಜೊತೆಗೆ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿತ್ತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!