ರವೀನಾ ಟಂಡನ್ ಮೇಲೆ ಹಲ್ಲೆ ಯತ್ನ

ಬಾಲಿವುಡ್ ನಟಿ ರವೀನಾ ಟಂಡನ್ ಮೇಲೆ ಮುಸ್ಲಿಂ ಮಹಿಳೆಯರು ಹಲ್ಲೆಗೆ ಯತ್ನಿಸಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಂಬೈನ ರಿಜ್ವಿ ಲಾ ಕಾಲೇಜ್ ಬಳಿ ಕಾರ್ಟರ್ ರಸ್ತೆಯಲ್ಲಿ ನಟಿ ರವೀನಾ ಟಂಡನ್ ಅವರ ಐಶಾರಾಮಿ ಕಾರು ಪಾರ್ಕ್‌ ಮಾಡಲಾಗಿತ್ತು. ಈ ವೇಳೆ ಮೊಹಮ್ಮದ್ ಎಂಬುವವರು ಅಲ್ಲಿಂದ ಹಾದು ಹೋಗುತ್ತಿದ್ದರು. ರವೀನಾ ಟಂಡನ್‌ ಅವರ ಕಾರು ಹಿಂಬದಿ ಚಲಿಸುತ್ತಿರುವಾಗ ಮೊಹಮ್ಮದ್ ಅವರ ತಾಯಿಗೆ ತಾಕಿದೆ. ಇದೇ ಕಾರಣಕ್ಕೆ ರವೀನಾ ಟಂಡನ್ ಅವರನ್ನು ಮೊಹಮ್ಮದ್ ಮತ್ತು ಅವರ ಮಗಳು ಪ್ರಶ್ನಿಸಿದ್ದಾರೆ. ಆಗ ರವೀನಾ ಅವರ ಚಾಲಕ ವಾಗ್ವಾದಕ್ಕೆ ಇಳಿದಿದ್ದಾನೆ.

ಚಾಲಕ ಮತ್ತು ಮೊಹಮ್ಮದ್ ನಡುವೆ ಜಗಳ ಶುರುವಾಗಿ ಇದನ್ನು ಕಂಡು ರವೀನಾ ಕಾರಿಂದ ಇಳಿದು ಬಂದಿದ್ದಾರೆ. ಇದರಿಂದ ಜಗಳ ಇನ್ನಷ್ಟು ತಾರಕಕ್ಕೇರಿದೆ. ರವೀನಾ ಟಂಡನ್‌ ಈ ವೇಳೆ ಕುಡಿದ ಮತ್ತಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ರವೀನಾ ಟಂಡನ್ ಮೊಹಮ್ಮದ್ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೊಹಮ್ಮದ್ ಮತ್ತು ಅವರ ಕುಟುಂಬ ರವೀನಾ ಟಂಡನ್ ಅವರನ್ನು ಪೊಲೀಸ್ ಠಾಣೆಗೆ ನಡೆಯುವಂತೆ ದೂಕಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಬಾಲಿವುಡ್ ನಟಿ ರವೀನಾ ಟಂಡನ್ ಅವರು ವಯೋವೃದ್ಧ ಮಹಿಳೆ ಸೇರಿದಂತೆ ಇತರ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಆದರೆ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು ಅದರಲ್ಲಿ ರವೀನಾ ಟಂಡನ್ ಅಲ್ಲಿ ನೆರೆದಿದ್ದ ಜನರಿಗೆ ‘ಹೊಡಿಬೇಡಿ ಪ್ಲೀಸ್’ ಎಂದು ಅಂಗಲಾಚುತ್ತಿರುವುದು ಕಂಡು ಬಂದಿದೆ. ಈ ವೇಳೆ ಮುಸ್ಲಿಂ ಮಹಿಳೆಯರು ನಟಿ ಮೇಲೆ ಹಲ್ಲೆಗೆ ಯತ್ನಿಸಿದ್ದು ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೆಲೆಬ್ರಿಟಿ ನಟಿಯ ಮೇಲೆ ಸುಳ್ಳು ಆರೋಪ ಮಾಡಿ ಸ್ಥಳೀಯ ಜನರು ಕೇಸು ದಾಖಲಿಸುವ ಯತ್ನ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರವೀನಾ ಟಂಡನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!