ʻಹಲಗಲಿʼ ಗೆ ನಟ ಡಾಲಿ ನಾಯಕ

ʻಹಲಗಲಿʼ ಸಿನಿಮಾಗೆ ನಟ ಡಾಲಿ ಧನಂಜಯ್‌ ನಾಯಕನಾಗಿ ಆಯ್ಕೆಯಾಗಿದ್ದು, ಸದ್ಯ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ಹಲಗಲಿ ಚಿತ್ರಕಥೆ ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಹಲಗಲಿ ಬೇಡರ ಕುರಿತಾದ ಕಥಾಹಂದರ ಹೊಂದಿದೆ. 1857ರ  ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತಿದ್ದರು. ಈ ವಿಷಯದ ಕುರಿತಾಗಿ  ಸಿನಿಮಾ ಮೂಡಿ ಬರಲಿದೆ.

ಈಗಾಗಲೇ ʻಹಲಗಲಿʼ ಚಿತ್ರದ ಮುಹೂರ್ತ ನೆರವೇರಿದ್ದು, ಒಂದು ಹಂತದ ಶೂಟಿಂಗ್‌ ಮಾಡಲಾಗಿದೆ. ಈ ಚಿತ್ರಕ್ಕೆ ಮೊದಲು ಡಾರ್ಲಿಂಗ್‌ ಕೃಷ್ಣ ಹೀರೋ ಆಗಿ ಆಯ್ಕೆಯಾಗಿದ್ದರು. ಪಾತ್ರಕ್ಕಾಗಿ ತಯಾರಿಗಳನ್ನು ಮಾಡಿಕೊಂಡಿದ್ದರು. ಆದರೆ ಡೇಟ್‌ ಸಮಸ್ಯೆಯಿಂದ ಕೃಷ್ಣ ಪ್ರಾಜೆಕ್ಟ್‌ನಿಂದ ಹೊರ ನಡೆದರು.

ಈ ಚಿತ್ರ ಸುಮಾರು 80 ಕೋಟಿ ರೂ ಯಲ್ಲಿ ನಿರ್ಮಾಣವಾಗುತ್ತಿದೆ. ಅದ್ಧೂರಿ ಸೆಟ್‌ ನಿರ್ಮಿಸುವ ಎಲ್ಲಾ ತಯಾರಿಗಳನ್ನು ಸಿನಿತಂಡ ಮಾಡಿಕೊಳ್ಳುತ್ತಿದೆ.  ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!