ಕಂಗನಾ ಬಳಿ ಕೋಟಿ….ಕೋಟಿ ಆಸ್ತಿ!

ಬಾಲಿವುಡ್​ನ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್  ನಾಮಪತ್ರ  ಸಲ್ಲಿಸಿದ್ದು, ಈ ವೇಳೆ ಒಟ್ಟು ಆಸ್ತಿ ಮೌಲ್ಯ 154.57 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದಾರೆ.

ಕಂಗನಾ ಒಟ್ಟು ಆಸ್ತಿ ಮೌಲ್ಯ 154.57 ಕೋಟಿ ರೂಪಾಯಿ ಇದ್ದು, 17.38 ಕೋಟಿ ರೂಪಾಯಿ ಸಾಲವಿದೆ ಎಂದು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ನೀಡಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಧಿಕೃತ ಮಾಹಿತಿಯಂತೆ ಸಾಲಕ್ಕಿಂತ10 ಪಟ್ಟು ಅಧಿಕ ಸ್ಥಿರ ಹಾಗೂ ಚರಾಸ್ತಿಯನ್ನು ಹೊಂದಿದ್ದಾರೆ.

ಕಂಗನಾ ಮಣಿಕರ್ಣಿಕಾ ಫಿಲಂ ಪ್ರೈವೇಟ್​ ಲಿಮಿಟೆಡ್​ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, ಈ ಸಂಸ್ಥೆ ಮೇಲೆ 1.21 ಕೋಟಿ ರೂಪಾಯಿ ಇನ್ವೆಸ್ಟ್​ ಮಾಡಿದ್ದಾರೆ. 5 ಕೋಟಿ ರೂಪಾಯಿ ಮೊತ್ತದ 50 ಎಲ್​​ಐಸಿ ಪಾಲಿಸಿಗಳನ್ನು ಹೊಂದಿದ್ದಾಗಿ ಘೋಷಿಸಿದ್ದಾರೆ.

ಕಂಗನಾ ರಣಾವತ್ ಬಳಿ 2 ಲಕ್ಷ ರೂಪಾಯಿ ನಗದ ಇದ್ದು, ಬ್ಯಾಂಕ್​​ನಲ್ಲಿ 2 ಕೋಟಿ ರೂಪಾಯಿ ಹಣವಿದೆ.  ಅಪ್ಪ, ಅಕ್ಕ, ಸಹೋದರ ಸೇರಿ ಇತರರಿಗೆ ಅಂದಾಜು 9.50 ಕೋಟಿ ರೂಪಾಯಿ ಸಾಲ ನೀಡಿದ್ದಾರೆ.

ಕಂಗನಾ ಬಳಿ 6.70 ಕಿಲೋ ಚಿನ್ನಾಭರಣ, 60 ಕೆಜಿ ಬೆಳ್ಳಿ ಸಾಮಗ್ರಿಗಳಿದ್ದು, ಅದರ ಮೌಲ್ಯ ಒಟ್ಟು 50 ಲಕ್ಷ ರೂಪಾಯಿ.  6 ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದು ಅದರ ಒಟ್ಟು ಮೌಲ್ಯ 31.41 ಕೋಟಿ.  ಹಿಮಾಚಲ ಪ್ರದೇಶದಲ್ಲಿ 31.42 ಕೋಟಿಯ 2 ದುಬಾರಿ ಮನೆ ಮತ್ತು ಕಮರ್ಷಿಯಲ್ ಹಾಗೂ ರೆಸಿಡೆನ್ಸ್​ ಸೇರಿ ಆಸ್ತಿಯ ಮೌಲ್ಯ 62.98 ರೂಪಾಯಿ ಆಗಲಿದೆ.

ಕಂಗನಾ ಹೆಸರಲ್ಲಿ ಇರುವ ಐಶರಾಮಿ ವಾಹನಗಳ ಒಟ್ಟು ಮೌಲ್ಯ 5.48 ಕೋಟಿ ರೂಪಾಯಿ ಆಗಲಿದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ಸಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!