ಶೂಟಿಂಗ್‌ ಮುನ್ನವೇ ಟಾಕ್ಸಿಕ್‌ ರಿಲೀಸ್‌ ಡೇಟ್‌ ಫಿಕ್ಸ್‌!

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ಶೂಟಿಂಗ್‌ ಪ್ರಾರಂಭವಾಗುವ ಮುನ್ನವೇ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ!

‘ಟಾಕ್ಸಿಕ್‌’ ಚಿತ್ರ ಮುಂದಿನ ವರ್ಷ ಏಪ್ರಿಲ್ 10ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ ಇದೇ ಏಪ್ರಿಲ್‌ನಲ್ಲಿ ಶುರುವಾವಾಗಲಿದೆ. ಚಿತ್ರದ ಶೂಟಿಂಗ್ ಶ್ರೀಲಂಕಾ, ಕರ್ನಾಟಕ ಹಾಗೂ ಗೋವಾದಲ್ಲಿ ನಡೆಯುತ್ತದೆ ಎನ್ನುವ ಮಾತುಗಳು ಕೇಳಿ ಬರ್ತಿದೆ.  ಸಿನಿಮಾ ಟೀಸರ್‌ನಲ್ಲಿ ಇದು ಡ್ರಗ್ಸ್ ಮಾಫಿಯಾ ಸುತ್ತ ಸುತ್ತುವ ಕಥೆ ಎನ್ನುವ ಸುಳಿವು  ಚಿತ್ರತಂಡ ಕೊಟ್ಟಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಅಲ್ಲದೇ ಪ್ಯಾನ್ ವರ್ಲ್ಡ್ ರೇಂಜ್‌ನಲ್ಲಿ ನಿರ್ಮಾಣ ಮಾಡುವ ಪ್ರಯತ್ನ ನಡೀತಿದೆ.  ಸಿನಿಮಾಗೆ ದೇಶ ವಿದೇಶದ ತಂತ್ರಜ್ಞರು, ಕಲಾವಿದರು ಕೆಲಸ ಮಾಡಲಿದ್ದಾರೆ.

ಈ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳಲಿದ್ದು, ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಸಂಯುಕ್ತಾ ಮೆನನ್ ನಾಯಕಿಯಾಗಿ ನಟಿಸುವುದು ಬಹುತೇಕ ಖಚಿತ ಎನ್ನಲಾಗಿದೆ.

ಸಿನಿಮಾಗೆ ಡೈರೆಕ್ಟರ್‌ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಛಾಯಾಗ್ರಹಣ ಮಾಡುವ ಸಾಧ್ಯತೆಯಿದೆ. ಸಾನಿಯಾ ಸರ್ದಾರಿಯಾ ಕಾಸ್ಟ್ಯೂಮ್ಸ್ ಡಿಸೈನ್ ಮಾಡಲಿದ್ದಾರೆ. ಲಂಡನ್ ಮೂಲದ ಜೆರೆಮಿ ಸ್ಟಾಕ್ ಟೀಸರ್‌ಗೆ ಮ್ಯೂಸಿಕ್ ಮಾಡಿದ್ದು, ಇವರೇ ಸಿನಿಮಾದ ಹಾಡುಗಳಿಗೆ ಸಂಗೀತಾ ಸಂಯೋಜಿಸಲಿದ್ದಾರೆ ಎನ್ನಲಾಗಿದೆ.

ಮೂರು ತಿಂಗಳ ಹಿಂದೆ ಟಾಕ್ಸಿಕ್‌ ಸಿನಿಮಾ ಘೋಷಣೆಯಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!