ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಕಲಾವಿದರ ಸಂಘದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಚಲನಚಿತ್ರ ನಿರ್ಮಾಪಕರಿಗೆ ನೀಡುವ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ದಿವಂಗತ ರಾಮು ಅವರಿಗೆ ಘೋಷಿಸಲಾಗಿದ್ದು ಅವರ ಪರವಾಗಿ ಪತ್ನಿ ಮಾಲಾಶ್ರೀ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಲಾಶ್ರೀ ಅವರು, ರಾಮ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದು ನನಗೆ ಖುಷಿಯಾಗಿದೆ. ಸುಧೀಂದ್ರ ಅವರು ನನ್ನ ಶನಿ ವೃತ್ತಿಯ ಆರಂಭದ ದಿನಗಳಲ್ಲಿ ಸಲಹೆಗಳನ್ನು ನೀಡುತ್ತಿದ್ದರು ಎಂದರು.
ಇದೇ ವೇಳೆ ಹಿರಿಯ ಪತ್ರಕರ್ತರಿಗೆ ನೀಡುವ ಪ್ರಶಸ್ತಿಯನ್ನು ಮುರಳಿಧರ ಖಜಾನೆ ಅವರಿಗೆ ನೀಡಲಾಯಿತು.
ಗಾಯಕ ಹೇಮಂತ್ ಕುಮಾರ್, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಶ್ರೀಮತಿ ಜಯಲಕ್ಷ್ಮಿ ಪಿ, ಹೇಮಂತ್ ರಾವ್, ಜೋ ಕೋಸ್ಟ, ಬಿ ಎಸ್ ಲಿಂಗದೇವರು, ಶರಣು ಹುಲ್ಲೂರು, ಸುಂದರ್ ರಾಜ್, ಕುಮಾರಿ ಸಿಂಧು ಶ್ರೀನಿವಾಸಮೂರ್ತಿ ಅವರಿಗೆ ಪ್ರಶಸ್ತಿ ನೀಡಲಾಯಿತು.
ಡಾಲಿ ಧನಂಜಯ ಅವರ ಪರವಾಗಿ ಹಿರಿಯ ನಟಿ ತಾರಾ ಅವರು ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರ ಪ್ರಶಸ್ತಿ ಪಡೆದ ಪತ್ರಕರ್ತ ಬಿ ಎನ್ ಸುಬ್ರಮಣ್ಯ ಅವರನ್ನು ಗೌರವಿಸಲಾಯಿತು.
ನಟ, ನಿರ್ಮಾಪಕ ವಿನೋದ್ ಪ್ರಭಾಕರ್ ಮಾತನಾಡಿ, ಸಿನಿಮಾ ಜನರಿಗೆ ತಲುಪಲು ಪಿ ಆರ್ ಓ ಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಸುಧೀಂದ್ರ ವೆಂಕಟೇಶ್ ಕೆಲಸ ಮಾಡಿದ್ದಾರೆ. ಚಿಕ್ಕ ಕಲಾವಿದರಿಂದ ನಾನು ಈಗ ನಿರ್ಮಾಪಕನಾಗಿದ್ದು, ನಮ್ಮ ತಂದೆಯವರ ಸಿಂಪ್ಲಿಸಿಟಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್ಎಂ ಸುರೇಶ್ ಮಾತನಾಡಿ, ರಾಜ್ ಕುಮಾರ್ ಅವರ ಕಾಲದಲ್ಲಿ ವಾಣಿಜ್ಯ ಮಂಡಳಿ ಎಂದರೆ ತುಂಬಾ ಗೌರವವಿತ್ತು. ಆದರೆ ಈಗ ಅದು ಮಾಯವಾಗಿದೆ. ನನ್ನ ಅವಧಿಯಲ್ಲಿ ಚಿತ್ರರಂಗಕ್ಕೆ 90 ವರ್ಷ ತುಂಬಿದ ದೊಡ್ಡ ಕಾರ್ಯಕ್ರಮ ನಡೆಸುವ ಅವಕಾಶ ಒದಗಿ ಬಂದಿರುವುದು ಭಾಗ್ಯ. ನಾನು ಅಧಿಕಾರದಲ್ಲಿರುವಷ್ಟು ದಿನ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದರು.
ವೇದಿಕೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪೂರ್ಣಿಮಾ ರಾಮ್ ಕುಮಾರ್, ಹಿರಿಯ ಪತ್ರಕರ್ತರಾದ ವಿಜಯಮ್ಮ, ನಟ ಶಶಿಕುಮಾರ್ ಇದ್ದರು.
ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಸುನಿಲ್, ವಾಸು ಅತಿಥಿಗಳನ್ನು ಸತ್ಕರಿಸಿದರು.
ಕನ್ನಡ ಚಿತ್ರರಂಗದ ಮೊದಲ ಪಿ ಆರ್ ಓ ಡಿ ವಿ ಸುಧೀಂದ್ರ ಅವರು ತಮ್ಮ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯ ಹೆಸರಿನಲ್ಲಿ ನಿರ್ಮಾಪಕರು ಹಾಗೂ ವರದಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು.
___
Be the first to comment