ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ದೇವಯಾನಿ”

ಕರ್ನಾಟಕದ ಮನೆ ಮನದ ಮನರಂಜನಾ ವಾಹಿನಿಯಾದ ಉದಯ ಟಿವಿ ತನ್ನಅಭೂತ ಪೂರ್ವ ಕಾರ್ಯಕ್ರಮಗಳಿಂದ ವೀಕ್ಷಕರ ಮನೆ ಮಾತಾಗಿದೆ. ಉದಯ ಟಿವಿ ದೀಪಾವಳಿಯ ಕೊಡುಗೆಯಾಗಿ ಹೊಸ ಧಾರಾವಾಹಿಯೊಂದನ್ನು ಪ್ರಾರಂಭಿಸಲಿದೆ. ಸಸ್ಪೇನ್ಸ್, ಥ್ರಿಲ್ಲರ್ ಹಾರರ್‍ಮತ್ತುಪ್ರೇಮಕಥೆಯನ್ನು ಒಳಗೊಂಡ ಹೊಸ ಕಥೆ“ದೇವಯಾನಿ”ಇದೇ ನವೆಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ದೇವಯಾನಿ 8 ವರ್ಷದಿಂದ ಶ್ರೀವತ್ಸನನ್ನ ಪ್ರೀತಿಸಿರುತ್ತಾಳೆ. ಅವರ ಪ್ರೀತಿಗೆಎರಡು ಮನೆಯವರಿಂದ ವಿರೋಧವಿದೆ. 8 ವರ್ಷದ ನಂತರಅವರ ಮದುವೆಗೆಎರಡುಕುಟುಂಬ ಒಪ್ಪಿಗೆಕೊಟ್ಟಿದೆ. ಹೀಗೆ ಮದುವೆ ಮಂಟಪವರೆಗೂ ಬಂದಾಗಅಲ್ಲಿಗೆ ಬರುವ ಪವಾಡ ಪುರುಷರೊಬ್ಬರು ಈ ಮದುವೆ ನಡೆದದ್ದೇಆದಲ್ಲಿದೇವಯಾನಿ ಸಾವಾಗುತ್ತದೆಎಂದು ಹೇಳುತ್ತಾರೆ.

ಅದಕ್ಕೆ ಪೂರಕವಾಗಿ, ಮದುವೆ ನಿಲ್ಲಿಸಲು ಪ್ರೇಮಿಗಳ ಸುತ್ತ ಹತ್ತಾರು ಶತ್ರುಗಳು ಸೇರುತ್ತಾರೆ.ದೇವಯಾನಿ ಮತ್ತು ಶ್ರೀವತ್ಸರನ್ನು ಕೊಲ್ಲುವಕುತಂತ್ರ ಮಾಡುತ್ತಾರೆ. ಈ ಎಲ್ಲಾಅಡ್ಡಿ ಆತಂಕಗಳಿಂದ ಪಾರಾಗುವ ಈ ಜೋಡಿ ಮದುವೆಯಾಗುತ್ತಾರೆ. ಮದುವೆಆದ ನಂತರವೂದೇವಯಾನಿ ಕಷ್ಟ ನಿಲ್ಲಲ್ಲ. ಶತಾಯಗತಾಯ ಶ್ರೀವತ್ಸ ದೇವಯಾನಿ ಜೋಡಿಯನ್ನಬೇರ್ಪಡಿಸಲೇ ಬೇಕೆನ್ನುವ ಕೆಲ ಹಿತ ಶತ್ರುಗಳು.

ಸಾವನ್ನುಗೆದ್ದು ಮತ್ತೆ ನಿನ್ನನ್ನ ಸೇರುವೆಎನ್ನುವದೇವಯಾನಿ ಕಥೆಏನಾಗುತ್ತೆ..?ದೇವಯಾನಿ ಸಾವನ್ನು ಹೇಗೆ ಗೆಲ್ಲುತ್ತಾಳೆ,ಶತ್ರುಗಳಿಂದ ಗಂಡನನ್ನ ಹೇಗೆ ರಕ್ಷಣೆ ಮಾಡ್ತಾಳೆ? ಎನ್ನುವಕುತೂಹಲ ಅಂಶದಿಂದ ಪ್ರತಿಯೊಂದು ಸಂಚಿಕೆಯಲ್ಲೂತಿರುವನ್ನು ಹೊಂದಿರುವಅಪರೂಪದಧಾರಾವಾಹಿ ದೇವಯಾನಿ.ದೇವಯಾನಿ ಧಾರಾವಾಹಿಯನ್ನು ಸುಂದರೇಶ್‍ಅವರು ಓಂ ಸಾಯಿರಾಂಕ್ರಿಯೇಷನ್ಸ್‍ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಆಕ್ಷನ್‍ಕಟ್‍ಜೊತೆಗೆಛಾಯಾಗ್ರಹಣ ನಿರ್ವಹಣೆಯನ್ನು ನಿರ್ದೇಶಕ ಜೊತೆಗೆಛಾಯಾಗ್ರಾಹಕಎಂ.ಕುಮಾರ್ ವಹಿಸಿಕೊಂಡಿದ್ದಾರೆ. ಥೆಯನ್ನುಖ್ಯಾತಕಥೆಗಾರರಾದಗಿರಿಜಾ ಮಂಜುನಾಥ್‍ಅವರು ಬರೆಯುತ್ತಿದ್ದು, ಸಂಭಾಷಣೆಯನ್ನುಗೌತಮ್ ವಖಾರಿ ಬರೆಯುತ್ತಿದ್ದಾರೆ. ಮಾಮೂಲುಅತ್ತೆ ಸೊಸೆಯಕಾಟ ಕಿರುಕುಳ ಕಥೆಯಿಂದ ಹೊರತಾಗಿರುವಈ ಹೊಸ ಧಾರಾವಾಹಿ ಪ್ರತಿಯೊಂದುಕಂತಿನಲ್ಲೂಕುತೂಹಲ ತಿರುವುಗಳನ್ನು ನೀಡುತ್ತಾ ಮನರಂಜಿಸುವುದರಲ್ಲಿಸಂಶಯವಿಲ್ಲ ಎಂದುತಂಡದವರು ಹೇಳುತ್ತಾರೆ. “ದೇವಯಾನಿ”ಇದೇ ನವಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!