ಚಿತ್ರ: ಗಾರುಡಿಗ
ನಿರ್ದೇಶನ: ವಿಧಾ ಆರ್
ನಿರ್ಮಾಣ: ವೆಂಕಟ ಸ್ವಾಮಿ
ತಾರಾಗಣ: ರುಧ್ವಿನ್, ಮಾನಸ, ವೆಂಕಟ ಸ್ವಾಮಿ, ಮೀನಾಕ್ಷಿ, ಮುರುಗ, ಹೇಮರೆಡ್ಡಿ, ಅರ್ಚನಾ ಇತರರು
ರೇಟಿಂಗ್: 3.5/5
ಆಕ್ಷನ್ ಜೊತೆಗೆ ರೊಮಾನ್ಸ್ ಕಥೆಯ ಜೊತೆ ಈ ವಾರ ತೆರೆಯ ಮೇಲೆ ಬಂದಿರುವ ಚಿತ್ರ ಗಾರುಡಿಗ.
ಹೊಸಬರ ತಂಡ ಲವ್, ಫೈಟ್, ಮಾಂತ್ರಿಕತೆಯ ಕಥೆಯನ್ನು ಹದವಾಗಿ ಮಿಶ್ರಣ ಮಾಡಿಕೊಂಡು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ. ಆಕ್ಷನ್ ಜೊತೆಗೆ ರೊಮಾನ್ಸ್ ಕಥೆ ಇಷ್ಟ ಪಡುವವರಿಗೆ ಚಿತ್ರ ಓಕೆ ಅನಿಸುತ್ತದೆ.
ಸಿನಿಮಾದ ಪ್ರಮುಖ ಪಾತ್ರಧಾರಿಗಳ ನಡುವೆ ಉತ್ತಮ ಹೊಂದಾಣಿಕೆ ಇರುವ ಕಾರಣ ಪ್ರೇಕ್ಷಕರಿಗೆ ಚಿತ್ರ ಬೇಸರ ಅನಿಸುವುದಿಲ್ಲ. ರುಧ್ವಿನ್, ಮಾನಸ, ವೆಂಕಟ ಸ್ವಾಮಿ, ಮೀನಾಕ್ಷಿ, ಮುರುಗ, ಹೇಮರೆಡ್ಡಿ, ಅರ್ಚನಾ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.
ಚಿತ್ರದ ಕಥೆಗೆ ಪೂರಕವಾಗಿ ಎಂ ಸಂಜೀವ್ ರಾವ್ ಅವರು ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಓಕೆ ಅನ್ನುವಂತಿವೆ.
ಸಾಕಷ್ಟು ಎಚ್ಚರವಹಿಸಿ ಮಾಡಿರುವ ಚಿತ್ರಕಥೆ, ಕೇಳಲು ಹಿತ ಅನಿಸುವ ಸಂಗೀತ, ಕಲಾವಿದರ ಬದ್ಧತೆಯ ನಟನೆಯಿಂದ ಚಿತ್ರ ನೋಡಲು ಬೋರ್ ಅನಿಸುವುದಿಲ್ಲ. ಒಟ್ಟಾರೆ ಚಿತ್ರ ಆಕ್ಷನ್ ಸೇರಿದಂತೆ ರೋಮಾನ್ಸ್ ಚಿತ್ರ ಇಷ್ಟ ಪಡುವವರಿಗೆ ಖುಷಿ ನೀಡಬಹುದು.
____





Be the first to comment