Ganesh: ಈ ವಾರ ಬಾನ ದಾರಿಯಲಿ ತೆರೆಗೆ

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಬಾನ ದಾರಿಯಲಿ ಚಿತ್ರ ಈ ವಾರ ತೆರೆ ಕಾಣುತ್ತಿದೆ.

ಪ್ರೀತಂ ಗುಬ್ಬಿ ನಿರ್ದೇಶನದ, ಶ್ರೀವಾರಿ ಟಾಕೀಸ್ ನಿರ್ಮಾಣದ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಈವರೆಗೂ ಮಾಡಿರದ ಪಾತ್ರವನ್ನು ಗಣೇಶ್ ಅವರು ಬಾನ ದಾರಿಯಲಿ ಚಿತ್ರದಲ್ಲಿ ಮಾಡಿದ್ದಾರೆ.

ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಗಣೇಶ್ ಜೋಡಿಯಾಗಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಅವರ ಸೊಗಸಾದ ಸಂಗೀತ ಸಂಯೋಜನೆ ಮಾಡಿದ್ದಾರೆ.

ಆಕ್ಷನ್ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ ಈ ಚಿತ್ರದಲ್ಲಿ ಪ್ರೇಮ ಕಥೆಗೆ ಪೆನ್ನು ಹಿಡಿದಿದ್ದಾರೆ. ಎಮೋಷನ್ ಕಥೆಗಳನ್ನು ಪರದೆ ಮೇಲೆ ತಂದಿದ್ದ ನಿರ್ದೇಶಕ ಪ್ರೀತಮ್ ಗುಬ್ಬಿ ಮೊಟ್ಟ ಮೊದಲಬಾರಿಗೆ ಎಮೋಷನ್ ಮತ್ತು ಲವ ಬ್ಲೆಂಡ್ ಮಾಡಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಚಿತ್ರವನ್ನು ಕೀನ್ಯಾ, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಇದು ಕೆಆರ್‍ಜಿ ಸ್ಟುಡಿಯೋಸ್ ವಿತರಣೆಯ ನೂರನೆಯ ಚಿತ್ರ ಆಗಿದೆ.

ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಗಣೇಶ್ ಅಭಿಮಾನಿಗಳು ಚಿತ್ರ ನೋಡಲು ಕಾತರ ಆಗಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!