ನಟ ಆಶಿಶ್ ವಿದ್ಯಾರ್ಥಿ 60 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾದ ಬೆನ್ನಿಗೇ ಅವರ ಮೊದಲ ಪತ್ನಿ ರಾಜೋಶಿ ಬರುವಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯನ್ನು ಪೋಸ್ಟ್ ಮಾಡಿರುವ ರಾಜೋಶಿ ಬರುವಾ, “ಸರಿಯಾದ ವ್ಯಕ್ತಿ ನೀವು ಅವರಿಗೆ ಏನು ಅರ್ಥೈಸುತ್ತೀರಿ ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳುವುದಿಲ್ಲ. ಅವರು ನಿಮಗೆ ನೋವುಂಟು ಮಾಡುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಇದನ್ನು ನೆನಪಿಡಿ” ಎಂದು ಬೇಸರದಿಂದ ಹೇಳಿದ್ದಾರೆ.
ರಾಜೋಶಿ ಇನ್ನೊಂದು ಪೋಸ್ಟ್ನಲ್ಲಿ, “ಬಹುಶಃ ಅತಿಯಾದ ಆಲೋಚನೆ ಮತ್ತು ಅನುಮಾನ ನಿಮ್ಮ ಮನಸ್ಸಿನಿಂದ ಹೋಗಿರಬಹುದು. ಸ್ಪಷ್ಟತೆಯು ಗೊಂದಲವನ್ನು ಬದಲಿಸಿರಬಹುದು. ಶಾಂತಿ ಮತ್ತು ತಾಳ್ಮೆ ನಿಮ್ಮ ಜೀವನವನ್ನು ತುಂಬಲಿ. ನೀವು ಬಹಳ ಸಮಯದಿಂದ ಬಲಶಾಲಿಯಾಗಿದ್ದೀರಿ. ಈಗ ನಿಮಗೆ ಆಶೀರ್ವಾದ ಪಡೆಯುವ ಸಮಯ ಬಂದಿದೆ. ಏಕೆಂದರೆ ನೀವು ಅದಕ್ಕೆ ಅರ್ಹರು” ಎಂದು ಬರೆದಿದ್ದಾರೆ.
ರಾಜೋಶಿ ಈಗ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೆ ಅವರ ಪೋಸ್ಟ್ ವೈರಲ್ ಆಗಿದೆ.
ಈಗ 60 ನೇ ವಯಸ್ಸಿನಲ್ಲಿ ಆಶಿಶ್ ವಿದ್ಯಾರ್ಥಿ ಎರಡನೇ ಮದುವೆ ಆಗಿದ್ದು, ಅವರಿಗೆ ಮೊದಲ ಪತ್ನಿಯಿಂದ 23 ವರ್ಷದ ಅರ್ಥ ವಿದ್ಯಾರ್ಥಿ ಎನ್ನುವ ಮಗನಿದ್ದಾನೆ. ಆಶಿಶ್ ಅವರ ಎರಡನೇ ಪತ್ನಿ ಗುವಾಹಟಿಯವರು ಆಗಿದ್ದು, ಫ್ಯಾಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
Be the first to comment