Diganth: ಹೊಸ ಚಿತ್ರ ಒಪ್ಪಿಕೊಂಡ ದಿಗಂತ್‌

ದೂದ್ ಪೇಡ ದಿಗಂತ್ ಹೊಸ ಸಿನಿಮಾ ಒಪ್ಪಿಕೊಂಡಿದ್ದು ಚಿತ್ರದಲ್ಲಿ ವಿಶೇಷ ರೋಲ್‌ ಮಾಡುತ್ತಿದ್ದಾರೆ.

ದಿಗಂತ್ ಅಭಿನಯದ ಈ ಚಿತ್ರಕ್ಕೆ ಲಾಫಿಂಗ್ ಬುದ್ಧ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಮತ್ತು ತೇಜು ಬೆಳವಾಡಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ನಟಿಸಿದ್ದಾರೆ.

ಲಾಫಿಂಗ್ ಬುದ್ಧ ಚಿತ್ರದ ಚಿತ್ರೀಕರಣದ ಕೊನೆ ಹಂತಕ್ಕೆ ಬಂದಿದೆ. ಈ ವೇಳೆ ದಿಗಂತ್ ಚಿತ್ರ ತಂಡ ಜಾಯಿನ್ ಆಗಿರುವ ಮಾಹಿತಿ ಹೊರ ಬಂದಿದೆ. ಚಿತ್ರದಲ್ಲಿ ದಿಗಂತ್ ಸ್ಪೆಷಲ್ ಆಗಿಯೇ ಬರ್ತಿದ್ದಾರೆ ಎನ್ನಲಾಗಿದೆ. ಚಿತ್ರದ ಡೈರೆಕ್ಟರ್ ಭರತ್ ರಾಜ್.

ಲಾಫಿಂಗ್ ಬುದ್ಧ ಸಿನಿಮಾದಲ್ಲಿ ನಿರೂರು ಎನ್ನುವ ಕಾಲ್ಪನಿಕ ಊರು ಇದ್ದು, ಇಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ರಿಷಬ್ ಶೆಟ್ಟಿ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

ಸಿನಿಮಾದಲ್ಲಿ ಮಲೆಯಾಳಂ ನಟ ವಿಷ್ಣು ವಿಜಯ್ ಅಭಿನಯಿಸಿದ್ದಾರೆ. ಕನ್ನಡದ ಹಿರಿಯ ನಟ ಸುಂದರಾಜ್ ಕೂಡ ಅಭಿನಯಿಸಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!