ramcharan: ರಾಮ್ ಚರಣ್ ಗೆ ನಾಯಕಿ ಜಾಹ್ನವಿ ಕಪೂರ್

ಬಾಲಿವುಡ್ ನಟಿ ಜಾಹ್ನವಿ ಕಪೂರ್, ರಾಮ್ ಚರಣ್ ಸಿನಿಮಾಗೆ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ರಾಮ್ ಚರಣ್ ತೇಜ ಮುಂದಿನ ಸಿನಿಮಾಗೆ ಜಾಹ್ನವಿ ಕಪೂರ್ ರನ್ನು ಕರೆತರಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ. ಒಂದು ವೇಳೆ ಜಾಹ್ನವಿ ಒಪ್ಪಿಕೊಂಡರೆ ಇದು ಅವರ ಎರಡನೇ ತೆಲುಗು ಸಿನಿಮಾವಾಗಲಿದೆ.

ಈಗಾಗಲೇ ಜಾಹ್ನವಿ ಜ್ಯೂ.ಎನ್ ಟಿಆರ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಜೂನಿಯರ್ ಎನ್.ಟಿ.ಆರ್. ಚಿತ್ರ NTR 30ರಲ್ಲಿ ನಟಿಸಲು ಜಾಹ್ನವಿ ಭರ್ಜರಿ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು.

ಜೂನಿಯರ್ ಎನ್.ಟಿ.ಆರ್. ಅವರ ಮುಂದಿನ ಚಿತ್ರದಲ್ಲಿ ಜಾಹ್ನವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ.

ಆರ್ ಆರ್ ಆರ್ ಭರ್ಜರಿ ಯಶಸ್ಸಿನ ಬಳಿಕ ಜೂನಿಯರ್ ಎನ್.ಟಿ.ಆರ್. ಅವರ ಈ ಚಿತ್ರ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಸಿನಿಮಾ ತಂಡ ಬಿಡುಗಡೆ ಮಾಡಿದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಸದ್ದು ಮಾಡಿದೆ.

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹೆಚ್ಚಿನ ಚಿತ್ರಗಳಲ್ಲಿ ನಟಿಸಿಲ್ಲ. ಅವರು ತೆರೆಯ ಮೇಲೆ ಖ್ಯಾತ ನಟರೊಂದಿಗೂ ಕಾಣಿಸಿಕೊಂಡಿಲ್ಲ. ಆದರೆ ಸಂಭಾವನೆ ವಿಚಾರದಲ್ಲಿ ಮಾತ್ರ ಜಾಹ್ನವಿ ಕಪೂರ್ ಬಾಲಿವುಡ್ ನಟಿಯರ ಸರಿ ಸಮಾನವಾಗಿ ನಿಂತು ಹುಬ್ಬೇರುವಂತೆ ಮಾಡಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!