huliya: ‘ಹುಲಿಯಾ’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌

ತೂತು ಮಡಿಕೆ ಚಿತ್ರದ ನಿರ್ದೇಶಕ ಚಂದ್ರ ಕೀರ್ತಿ ಮುಂದಿನ ಚಿತ್ರಕ್ಕೆ ಹುಲಿಯಾ ಎಂದು ಹೆಸರಿಡಲಾಗಿದ್ದು, ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಆಗಿದೆ.

ಇದೇ ಶೀರ್ಷಿಕೆಯಲ್ಲಿ 1996ರಲ್ಲಿ ಹಿರಿಯ ನಟ ದೇವರಾಜ್ ನಟನೆಯ ಸಿನಿಮಾ ತೆರೆಕಂಡಿತ್ತು. ಹುಲಿಯಾ ಸಿನಿಮಾ ಮೂಲಕ ಮತ್ತೇ ನಿರ್ದೇಶನಕ್ಕಿಳಿದಿರುವ ಚಂದ್ರ ಕೀರ್ತಿ, ಲವ್-ಆಕ್ಷನ್ ಎಂಟರ್ಟೈನರ್ ಚಿತ್ರ ಮಾಡುವ ನಿರೀಕ್ಷೆಯಿದೆ. ನಿರ್ದೇಶನದ ಜೊತೆಗೆ ಚಂದ್ರ ಕೀರ್ತಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್ ನಟ ದೈಹಿಕ ರೂಪಾಂತರಕ್ಕೆ ಒಳಗಾಗಿರುವುದನ್ನು ತೋರಿಸುತ್ತಿದೆ. ಈ ಚಿತ್ರಕ್ಕೆ ತೂತು ಮಡಿಕೆ ನಿರ್ಮಿಸಿದ ಮಧುಸೂದನ್ ರಾವ್ ಮತ್ತು ವಸಂತ ವಲ್ಲಭ ಬೆಂಬಲ ನೀಡಿದ್ದಾರೆ.

ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದು, ಸ್ವಾಮಿನಾಥನ್ ಅವರ ಛಾಯಾಗ್ರಹಣವಿದೆ. ತಾರಾಗಣ ಮತ್ತು ಸಿಬ್ಬಂದಿಯ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳುವ ನಿರೀಕ್ಷೆ ಇದೆ.

ಚಂದ್ರ ಕೀರ್ತಿ ಅವರು ಸಿಲಿಕಾನ್ ಸಿಟಿ, ಕಿಸ್, ಮೂಕವಿಸ್ಮಿತ ಮತ್ತು ಬೆಂಕಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಿಗಾಗಿ ಹೆಸರು ಗಳಿಸಿದ್ದರು. ನಂತರ ಅವರು ತೂತು ಮಡಿಕೆ ಸಿನಿಮಾ ಮೂಲಕ ಚೊಚ್ಚಲ ನಿರ್ದೇಶನಕ್ಕಿಳಿದಿದ್ದರು. ನಿರ್ದೇಶನ ಅಲ್ಲದೇ ಅವರು ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದರು.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!