Maajar: ಏಪ್ರಿಲ್ 1ಕ್ಕೆ “ಮಾಜರ್” ಹಾಡು ರಿಲೀಸ್‌

ಏಪ್ರಿಲ್ 1ರಂದು “ಮಾಜರ್” ಹಾಡುಗಳು ರಿಲೀಸ್ ಆಗಲಿವೆ.

ಗೀತರಚನೆಕಾರ ಲೋಕಲ್ ಲೋಕಿ ಅವರ ಪ್ರಥಮ ನಿರ್ದೇಶನದಲ್ಲಿ “ಮಾಜರ್” ಸಿನಿಮಾ ಮೂಡಿ ಬಂದಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಮೂರು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು ಆಗಿದೆ.

ಸಂಗೀತ ಸಿನಿ ಹೌಸ್ ಲಾಂಛನದಲ್ಲಿ ಮುರುಗನಂಥನ್ ಎಂ ನಿರ್ಮಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ವಿನಯ್ ಗೌಡ, ಗಗನ್ ಗೌಡ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಸಂಕಲನ, ರಾಕೇಟ್ ವಿಕ್ರಮ್ ಸಾಹಸ ನಿರ್ದೇಶನ, ಸೈ ಗೀತ, ವಾಸ್ತು ನಾಗ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಉಗ್ರಂ ರವಿ, ಸಂಭ್ರಮ ಗೌಡ, ಅರ್ಜುನ್ , ಪುಲಿ ಮುರುಗನ್, ಲೋಕಲ್ ಲೋಕಿ, ಹರೀಶ್, ರಾಜು, ವಿಶ್ವ ಮುಂತಾದವರು “ಮಾಜರ್” ಚಿತ್ರದ ತಾರಾಬಳಗದಲ್ಲಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!