Tennis krishna: ಟೆನ್ನಿಸ್ ಕೃಷ್ಣಗೆ ಟಿಕೆಟ್ ನೀಡಿದ ಆಮ್ ಆದ್ಮಿ

ಟೆನ್ನಿಸ್ ಕೃಷ್ಣಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಣೆ ಮಾಡಿದೆ.

ಟೆನಿಸ್ ಕೃಷ್ಣ ತುರುವೇಕರೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಹಾಸ್ಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಟೆನ್ನಿಸ್ ಕೃಷ್ಣ, ಕನ್ನಡದ ಅನೇಕ ಹೆಸರಾಂತ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಅಂತೆಯೇ ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಹಲವಾರು ಚಿತ್ರಗಳನ್ನು ಮಾಡಿರುವ ಸ್ಮೈಲ್ ಶ್ರೀನು ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಈಗಾಗಲೇ ಹಲವು ತಿಂಗಳಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಚಾರವನ್ನೂ ಆರಂಭಿಸಿದ್ದಾರೆ.

ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸಗಳಲ್ಲೂ ಇವರು ಗುರುತಿಸಿಕೊಂಡಿದ್ದಾರೆ. ನಟ ಶಶಿಕುಮಾರ್ ಪುತ್ರನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಕೀರ್ತಿ ಶ್ರೀನಿವಾಸ್ ಅವರದ್ದು ಆಗಿದೆ.

80 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ರಿಲೀಸ್ ಮಾಡಿದೆ. ಆಮ್ ಆದ್ಮಿ ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್ ಮುಗಿಸಿರುವವರು , 3 ಜನ ಎಂಬಿಬಿಎಸ್ ಮುಗಿಸಿರುವವರು, 13 ಜನ ಲಾಯರ್ಸ್, ಪತ್ರಕರ್ತರು ಹಾಗೂ ಕಲಾವಿದರು ಇದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!