Kabzaa: ಎರಡೇ ದಿನದಲ್ಲಿ 100‌ ಕೋಟಿ ಕಲೆಕ್ಷನ್ ಮಾಡಿದ ಕಬ್ಜ

ಎರಡೇ ದಿನಕ್ಕೆ 100‌ ಕೋಟಿ ರೂಪಾಯಿ ಕ್ಲಬ್ ಸೇರಿದ‌ ಖ್ಯಾತಿಗೆ ‘ಕಬ್ಜ’ ಸೇರ್ಪಡೆ ಆಗಿದೆ.

ಕಬ್ಜ ವಿಶ್ವಾದ್ಯಂತ ಬಿಡುಗಡೆಯಾಗಿ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ₹54 ಕೋಟಿ ಗಳಿಕೆ ಮಾಡಿತ್ತು. ಆದರೆ ಎರಡೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಎರಡನೇ ದಿನ ‌ಮಾಡಿದ ದಾಖಲೆಯ ಬಗ್ಗೆ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಖುಷಿಪಟ್ಟಿದೆ.

ನಿರ್ದೇಶಕ ಆರ್.ಚಂದ್ರು, “ಈ ಸಿನಿಮಾ ಆಗಲು ಮುಖ್ಯ ಕಾರಣ ಉಪೇಂದ್ರ ಸಾರ್. ಪುನೀತ್ ರಾಜ್‍ಕುಮಾರ್ ಸಾರ್ ನನ್ನ ಸಿನಿಮಾ ಚಿತ್ರೀಕರಣದ ಸೆಟ್​ಗೆ ಬಂದು ಹಾಲಿವುಡ್ ಶೈಲಿಯ ಮೇಕಿಂಗ್ ಮಾಡ್ತಾ ಇದ್ಯಾ ಚಂದ್ರು ಎಂದು ಹೇಳಿದಾಗಲೇ ನಾನು ಮೊದಲು ಗೆದ್ದೆ. ಎರಡನೇಯದು ನನ್ನ ಸಿನಿಮಾ ಮೇಕಿಂಗ್ ತೋರಿಸಿ ಟಿವಿ ಹಾಗು ಡಿಜಿಟಲ್ ರೈಟ್ಸ್ ಮಾರಾಟ ಮಾಡಿದಾಗ ಎರಡನೇ ಗೆಲುವು. ಈಗ ವಿಶ್ವಾದ್ಯಂತ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡ್ತಿರೋದು ನನ್ನ ಮೂರನೇ ಗೆಲುವು” ಎಂದರು.

ಬಳಿಕ ಮಾತನಾಡಿದ ಉಪೇಂದ್ರ, “ಆರ್.ಚಂದ್ರು ಅವರು ಕಬ್ಜ ಸಿನಿಮಾ ಮಾಡಿ ಗೆದ್ದಿದ್ದಾರೆ. ಈಗ ಕಬ್ಜ 2 ಮಾಡುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಕಬ್ಜದಿಂದ ಲಕ್ಷಾಂತರ ಜನರಿಗೆ ‌ಕೆಲಸ ಸಿಕ್ಕಿದೆ. ಅದು‌ ದೊಡ್ಡ ವಿಷಯ. ನಾನು ಕಬ್ಜ 2 ಚಿತ್ರಕ್ಕೆ ಕಾಯುತ್ತಿದ್ದೇನೆ” ಎಂದರು.

ಖಾಸಗಿ ಹೊಟೇಲ್‌ನಲ್ಲಿ ನಡೆದ ಸಕ್ಸಸ್ ಮೀಟ್‌ನಲ್ಲಿ ಉಪೇಂದ್ರ,‌ ಆರ್.ಚಂದ್ರು, ‌ವಿತರಕರಾದ ಮೋಹನ್, ಚಂದ್ರು, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಟರಾದ ಬಿ.ಸುರೇಶ್, ಅನೂಪ್ ರೇವಣ್ಣ, ತಮಿಳು ನಟ ಕಾಮರಾಜನ್, ನೀನಾಸಂ ಅಶ್ವತ್, ಕೋಟೆ ಪ್ರಭಾಕರ್, ಪೋಷಕ ನಟಿಯರಾದ ಶೋಭಾ ರಾಘವೇಂದ್ರ ಸೇರಿದಂತೆ ಸಿನಿಮಾ ತಂಡ ಭಾಗಿಯಾಗಿತ್ತು.

ಜರ್ಮನಿಯ ಬರ್ಲಿನ್, ಮಲೇಷಿಯಾ, ಇಂಡೋನೇಷಿಯಾ, ಯು.ಕೆ., ಯು.ಎಸ್, ಆಸ್ಟ್ರೇಲಿಯಾ, ಮಸ್ಕತ್ ಹೀಗೆ ವಿಶ್ವದ ಅನೆಕ ಕಡೆಗಳಲ್ಲಿ ಸಿನಿಮಾ ತೆರೆ ಕಂಡಿದೆ. ಈ ಎಲ್ಲಾ ಲೆಕ್ಕಾಚಾರದ ಪ್ರಕಾರ‌ ಮೊದಲ ದಿನ‌ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸಿನಿಮಾ ಎರಡನೇ ದಿನಕ್ಕೆ 46 ಕೋಟಿ ಕಲೆಕ್ಷನ್ ಮಾಡುವ ಮೂಲಕ‌ 100‌‌ ಕೋಟಿ‌ ಕ್ಲಬ್ ಸೇರಿದೆ ಎಂದು ಗಾಂಧಿನಗರದ ಮೂಲಗಳು ಹೇಳಿವೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!