ನಟಿ ಪವಿತ್ರಾ ಲೋಕೇಶ್ ಜೊತೆ ನಟ ನರೇಶ್ ಮದುವೆ ಆಗಿದ್ದಾರೆ.
ಸಪ್ತಪದಿ ತುಳಿದ ವಿಡಿಯೋವನ್ನು ನರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪವಿತ್ರಾ ಲೋಕೇಶ್ ಹಾಗೂ ನರೇಶ್ ಮಧ್ಯೆ ಪ್ರೀತಿಯ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಈ ವಿಚಾರದಲ್ಲಿ ನರೇಶ್ ಹಾಗೂ ಅವರ ಪತ್ನಿ ರಮ್ಯಾ ಕಿತ್ತಾಡಿಕೊಂಡಿದ್ದರು. ಬಳಿಕ ಪವಿತ್ರಾ ಲೋಕೇಶ್ ಗೆ ಕಿಸ್ ಮಾಡುತ್ತಿರುವ ವಿಡಿಯೋವನ್ನು ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ಶೇರ್ ಮಾಡಿದ್ದರು. ಈಗ ಅವರು ಮದುವೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.
‘ಹೊಸ ಪಯಣ. ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ನಿಮ್ಮ ಆಶೀರ್ವಾದ ಇರಲಿ. ಒಂದು ಪವಿತ್ರ ಬಂಧ. ಎರಡು ಮನಸ್ಸುಗಳು, ಏಳು ಹೆಜ್ಜೆಗಳು, ನಿಮ್ಮ ಆಶೀರ್ವಾದವನ್ನು ಕೋರಿ. ನಿಮ್ಮ ಪವಿತ್ರಾ ನರೇಶ್’ ಎಂದು ನರೇಶ್ ಟ್ವೀಟ್ ಮಾಡಿದ್ದಾರೆ.
ನಟಿ ಪವಿತ್ರಾ ಲೋಕೇಶ್ ಅವರನ್ನು ನರೇಶ್ ಲವ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಮ್ಯಾ ರಘುಪತಿ ಈ ಮೊದಲು ಗಲಾಟೆ ಮಾಡಿದ್ದರು.
ಈ ವೇಳೆ ಮಾತನಾಡಿದ್ದ ರಮ್ಯಾ, ‘ನಾವಿಬ್ಬರೂ ಬೇರೆ ಆಗುವುದಿಲ್ಲ ಎಂದು ಮಗನಿಗೆ ಪ್ರಾಮಿಸ್ ಮಾಡಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ. ಏನೇ ಆದರೂ ವಿಚ್ಛೇದನ ಕೊಡಲ್ಲ’ ಎಂದಿದ್ದರು.
ಈಗ ವಿಚ್ಛೇದನ ಪಡೆಯದೆ ಪವಿತ್ರಾ ಲೋಕೇಶ್ ಅವರನ್ನು ನರೇಶ್ ಮದುವೆ ಆದರೇ ಎನ್ನುವ ಪ್ರಶ್ನೆ ಎದುರಾಗಿದೆ.
__
Seeking your blessings for a life time of peace & joy in this new journey of us🤗
ఒక పవిత్ర బంధం
రెండు మనసులు
మూడు ముళ్ళు
ఏడు అడుగులు 🙏మీ ఆశీస్సులు కోరుకుంటూ ఇట్లు
– మీ #PavitraNaresh ❤️ pic.twitter.com/f26dgXXl6g— H.E Dr Naresh VK actor (@ItsActorNaresh) March 10, 2023
Be the first to comment