Deepika Padukone: ಆಸ್ಕರ್ ಸಮಾರಂಭಕ್ಕೆ ತೆರಳಿದ ದೀಪಿಕಾ

ಅಮೆರಿಕದಲ್ಲಿ ನಡೆಯುವ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ಮುಂಬೈನಿಂದ ಲಾಸ್​ ಏಂಜಲೀಸ್​ಗೆ ಪ್ರಯಾಣಿಸಿದರು.

ಪ್ರತಿಷ್ಟಿತ ಪ್ರಶಸ್ತಿಯ ಪ್ರೆಸೆಂಟರ್ ಆಗಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿನಲ್ಲಿ ‘ಬಾಲಿವುಡ್​ ಮಸ್ತಾನಿ’ ಸೆರೆಯಾಗಿದ್ದು, ಎಂದಿನಂತೆ ಸಿಂಪಲ್​ ಕ್ಯಾಶುವಲ್​ ಲುಕ್​ನಲ್ಲಿ ಕಾಣಿಸಿಕೊಂಡರು. ಪತಿ, ನಟ ರಣ್​ವೀರ್​ ಸಿಂಗ್​ ಬೀಳ್ಕೊಡಲು ಏರ್​ಪೋರ್ಟ್​ಗೆ ಆಗಮಿಸಿದ್ದರು.

ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಆಸ್ಕರ್‌ ವೇದಿಕೆ ಮೇಲೇರಲಿದ್ದಾರೆ. ಈ ಸಾಲಿನ ಆಸ್ಕರ್‌ ಸಮಾರಂಭದಲ್ಲಿ ಹಲವು ಪ್ರಸಿದ್ಧ ವ್ಯಕ್ತಿಗಳು ಇರಲಿದ್ದಾರೆ.

ಎಸ್‌.ಎಸ್.ರಾಜಮೌಳಿ ಮತ್ತು ಆರ್‌ಆರ್‌ಆರ್ ಚಿತ್ರತಂಡ ಕೂಡ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಾಜರಾಗಲು ಸಜ್ಜಾಗಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ನಾಟು ನಾಟು ಹಾಡಿನ ಲೈವ್ ಪ್ರದರ್ಶನ ಕೂಡ ಇರಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!