oscar: ಆಸ್ಕರ್ ಸ್ಪರ್ಧೆಗೆ ಮತ ಚಲಾಯಿಸಿದ ಸೂರ್ಯ

ಆಸ್ಕರ್​ ಪ್ರಶಸ್ತಿಯ ಕಮಿಟಿಯಲ್ಲಿ ಸದಸ್ಯತ್ವ ಹೊಂದಿರುವ ದಕ್ಷಿಣ ಭಾರತದ ಏಕೈಕ ನಟ ಸೂರ್ಯ ಅವರು ಆಸ್ಕರ್​ ಸ್ಪರ್ಧೆಗೆ ತಮ್ಮ ಮತ ಚಲಾಯಿಸಿದ್ದಾರೆ.

ಆಸ್ಕರ್​ ಸ್ಪರ್ಧೆಗೆ ವೋಟ್​ ಮಾಡಿರುವ ವಿಷಯವನ್ನು ​ಟ್ವಿಟರ್​ ಮೂಲಕ ಸೂರ್ಯ ಅವರು ಖಚಿತಪಡಿಸಿದ್ದಾರೆ.

ಸೂರ್ಯ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ‘ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆಯಂಡ್​ ಸೈನ್ಸಸ್​’ ಸದಸ್ಯತ್ವ ನೀಡಲಾಗಿದೆ. ಈ ಬಾರಿ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಸ್ಪರ್ಧೆಯಲ್ಲಿದೆ. ಆ ಕಾರಣದಿಂದ ಆಸ್ಕರ್ ಪ್ರಶಸ್ತಿ ಹೆಚ್ಚು ನಿರೀಕ್ಷೆ ಮೂಡಿಸಿದೆ.

95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಆಸ್ಕರ್​ ಪ್ರಶಸ್ತಿ ಗೆದ್ದವರಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ. ಈ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು.

ಮಾರ್ಚ್​ 13ರಂದು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ 95ನೇ ಸಾಲಿನ ಆಸ್ಕರ್​ ಅವಾರ್ಡ್ಸ್​ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ಭಾರತದ ಸಿನಿಮಾಗಳು 3 ವಿಭಾಗದಲ್ಲಿ ನಾಮಿನೇಟ್​ ಆಗಿರುವುದರಿಂದ ಆಸ್ಕರ್ ಪ್ರಶಸ್ತಿ ಬಗ್ಗೆ ಹೆಚ್ಚಿನ ಕುತೂಹಲ ಉಂಟಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!