Rajanikanth: ಮಗಳ ಚಿತ್ರಕ್ಕೆ ತಲೈವಾ ದುಬಾರಿ ಸಂಭಾವನೆ

ರಜನಿಕಾಂತ್ ತಮ್ಮ ಮಗಳ ಸಿನಿಮಾದಲ್ಲಿ ನಟಿಸಲು 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಐಶ್ವರ್ಯಾ ರಜನಿಕಾಂತ್ ಸದ್ಯ ಹೊಸ ಸಿನಿಮಾದ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಮಗಳ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನ ರಜನಿಕಾಂತ್ ಪಡೆದಿದ್ದಾರೆ ಎಂದು ಸುದ್ದಿಯಾಗಿದೆ.

ಲಾಲ್ ಸಲಾಮ್’ನಲ್ಲಿ ನಟಿಸಲು 25 ಕೋಟಿ ರೂಪಾಯಿ ಸಂಭಾವನೆಯನ್ನು ರಜನಿಕಾಂತ್ ಪಡೆಯುತ್ತಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ತಲೈವಾ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಒಟ್ಟು 7 ದಿನಗಳ ಶೂಟಿಂಗ್‌ನಲ್ಲಿ ತಲೈವಾ ಭಾಗಿಯಾಗುತ್ತಿದ್ದು, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!