Satya: ಏಪ್ರಿಲ್ ನಲ್ಲಿ ಮೊಲೋಡಿ ಡ್ರಾಮಾ ತೆರೆಗೆ

ಸತ್ಯ ನಟನೆಯ ” ಮೊಲೋಡಿ ಡ್ರಾಮಾ” ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ.

ಪ್ರೈಮ್ ಸ್ಟಾರ್ ಸ್ಟುಡಿಯೊ ನಿರ್ಮಿಸಿರುವ “ಮೆಲೋಡಿ ಡ್ರಾಮಾ”, ಪ್ರೀತಿ ಮತ್ತು ನಂಬಿಕೆ ಇವೆರಡರ ನಡುವಿನ ಪಯಣದಲ್ಲಿ ಭಾವನೆಗಳ ತೊಳಲಾಟವನ್ನು ವ್ಯಕ್ತ ಪಡಿಸುವ ಚಿತ್ರವಾಗಿದೆ.

“ದ್ಪಿಪಾತ್ರ” ಚಿತ್ರದ ಮೂಲಕ ನಾಯಕನ ಪಾತ್ರ ಮಾಡಿದ ಸತ್ಯ ಈ ಚಿತ್ರದ ನಾಯಕ. ಜನಪ್ರಿಯ ಧಾರಾವಾಹಿ, “ಲಾಂಗ್ ಡ್ರೈವ್” ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಸುಪ್ರಿತಾ ಸತ್ಯನಾರಾಯಣ ಚಿತ್ರದ ನಾಯಕಿ. ಚೇತನ್ ಚಂದ್ರ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ರಂಗಾಯಣ ರಘು, ಅನುಪ್ರಭಾಕರ್, ರಾಜೇಶ್ ನಂಟರಂಗ, ಬಲ ರಾಜವಾಡಿ, ಲಕ್ಷ್ಮಿ ಸಿದ್ದಯ್ಯ, ಅಶ್ವಿನ್ ರಾವ್ ಪಲ್ಲಕ್ಕಿ, ಅಶ್ವಿನ್ ಹಾಸನ್, ರಂಜನ್ ಸನತ್, ಬಿಗ್ ಬಾಸ್ ವಿನೋದ್ ಗೊಬ್ಬರ ಮುಂತಾದವರು ನಟಿಸಿದ್ದಾರೆ.

ಮಂಜು ಕಾರ್ತಿಕ್ ಜಿ ಈ ಚಿತ್ರದ ನಿರ್ದೇಶಕ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಚಿತ್ರದ ನಿರ್ಮಾಪಕ M ನಂಜುಂಡ ರೆಡ್ಡಿ (ನಡುವಲಮನೆ).

ಬೆಂಗಳೂರು, ಮಂಡ್ಯ, ಮೈಸೂರು, ಕುಶಾಲನಗರ, ಮಡಿಕೇರಿ, ಶಿವಮೊಗ್ಗ, ಮಂಗಳೂರು, ಕುಂದಾಪುರ ಹಾಗೂ ವಿಜಯಪುರದ ರಮಣೀಯ ಸ್ಥಳಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ಮನು DB ಹಳ್ಳಿ ಛಾಯಾಗ್ರಹಣ, ಮುನಿರಾಜ್ ಅವರ ಸಂಕಲನವಿರುವ ಈ ಚಿತ್ರದ ಪ್ರಥಮ ಪ್ರತಿ ರೆಡಿ ಆಗಿದೆ. ಸದ್ಯದಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ.

ಕನ್ನಡದ ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡಿರುವ ಕಿರಣ್ ರವೀಂದ್ರನಾಥ್ ಸಂಗೀತ ನಿರ್ದೇಶನದಲ್ಲಿ ಎಂಟು ಹಾಡುಗಳು ಈ ಚಿತ್ರದಲ್ಲಿದೆ. ಸೋನು ನಿಗಮ್, ಕೈಲಾಶ್ ಖೇರ್ ಹಾಗೂ ಪಲಾಕ್ ಮುಚ್ಚಲ್ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಜಯಂತ್ ಕಾಯ್ಕಿಣಿ , ವಿ. ನಾಗೇಂದ್ರ ಪ್ರಸಾದ್, ಹೃದಯ ಶಿವ, ಧನಂಜಯ್ ರಂಜನ್ ಗೀತರಚನೆ ಮಾಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!