kanthara: ಕಾಂತಾರ ಮರು ಬಿಡುಗಡೆ

ಕಾಂತಾರ ಸಿನಿಮಾ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮರು ಬಿಡುಗಡೆಯಾಗುತ್ತಿದೆ.

ಈ ರಾಜ್ಯಗಳಲ್ಲಿ ಪ್ರತಿವರ್ಷ ಶಿವರಾತ್ರಿಯ ದಿನದಂದು ಆ ವರ್ಷ ಸೂಪರ್ ಹಿಟ್ ಆಗಿದ್ದ ತೆಲುಗು ಸಿನಿಮಾಗಳ ಪೈಕಿ ಮೂರು ಸಿನಿಮಾಗಳನ್ನು ರಾತ್ರಿಯಿಡೀ ಪ್ರದರ್ಶನ ಮಾಡಲಾಗುತ್ತದೆ. ಅದರಂತೆ ಈ ಬಾರಿ ಕಾಂತಾರ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗುವುದು.

ರಿಷಬ್‌ ಶೆಟ್ಟಿ ಈ ಸಿನಿಮಾದಲ್ಲಿ ನಾಯಕಯಾಗಿ ನಟಿಸಿದ್ದು, ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್ ಮತ್ತು ಅಚ್ಯುತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವು 2022 ರ ಅತಿದೊಡ್ಡ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ಒಂದಾಗಿದೆ. ರಿಷಬ್‌ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಇದುವರೆಗೆ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ. ಶಿವರಾತ್ರಿಯಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ನಿರ್ಧರಿಸಲಾಗಿದೆ.

ಚಿತ್ರವು ಕರಾವಳಿ ಭಾಗದ ಜನರ ದೈವಿಕ ಕಲೆಯಾದ ಭೂತಕೋಲವನ್ನು ಒಳಗೊಂಡಿದೆ. ಎಷ್ಟೋ ಜನ ಆ ಕಲೆಯನ್ನು ಇಷ್ಟಪಟ್ಟಿದ್ದರಿಂದ ಕಾಂತಾರ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!