Love birds ಸಂಯುಕ್ತಾ ಹೊರನಾಡ್ ಫಸ್ಟ್ ಲುಕ್ ಅನಾವರಣ

‘ಲವ್ ಬರ್ಡ್ಸ್’ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ ಪಾತ್ರದ ಫಸ್ಟ್ ಲುಕ್ ಅನಾವರಣ ಆಗಿದೆ.

ಲವ್ ಬರ್ಡ್ಸ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದ್ದ ನಿರ್ದೇಶಕ ಪಿಸಿ ಶೇಖರ್, ಸಿನಿಮಾದಲ್ಲಿ ವಕೀಲೆ ಮಾಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಂಯುಕ್ತಾ ಹೊರನಾಡ್ ಅವರ ಪೋಸ್ಟರ್ ಹಂಚಿಕೊಂಡಿದ್ದಾರೆ.

ಮಾಯಾ ಧೈರ್ಯಶಾಲಿ ಹುಡುಗಿ ಮತ್ತು ಯಶಸ್ವಿ ವಕೀಲೆ. ಆಕೆ ಕೃಷ್ಣ ಮತ್ತು ಮಿಲನಾ ಚಾರೆಕ್ಟರ್ ಆದ ದೀಪಕ್ ಮತ್ತು ಪೂಜಾ ಇಬ್ಬರಿಗೂ ಸ್ನೇಹಿತೆ ಎಂದು ನಿರ್ದೇಶಕರು ಹೇಳಿದ್ದಾರೆ.

ಮದುವೆಯ ನಂತರ ಯಶಸ್ವಿ ಜೀವನ ನಡೆಸುತ್ತಿರುವ ಜೋಡಿಯ ಕುರಿತಾದ ಚಿತ್ರವಾದ ಲವ್ ಬರ್ಡ್ಸ್ ಚಿತ್ರದನ್ನು ಶ್ರೀಬನಶಂಕರಿ ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ಕಡ್ಡಿಪುಡಿ ಚಂದ್ರು ಅವರು ನಿರ್ಮಿಸಿದ್ದಾರೆ.

ಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದು, ಮೊದಲ ಹಾಡು ಜನವರಿ 22 ರಂದು ಬಿಡುಗಡೆ ಆಗಲಿದೆ. ಶಕ್ತಿ ಶೇಖರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!