`ಪಠಾಣ್’ ಸಿನಿಮಾದ `ಬೇಷರಂ ರಂಗ್’ ಹಾಡಿನ ಜೊತೆ ಚಿತ್ರದಲ್ಲಿನ ಅನೇಕ ದೃಶ್ಯಗಳನ್ನ ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ `ಪಠಾಣ್’ ಜನವರಿ 25ರಂದು ತೆರೆಗೆ ಬರಲಿದೆ. ರಿಲೀಸ್ಗೂ ಮುನ್ನ ಚಿತ್ರದಲ್ಲಿ ಬದಲಾವಣೆ ಆಗದೇ ಇದ್ದಲ್ಲಿ ಸೆನ್ಸಾರ್ ಪತ್ರ ಸಿಗುವುದು ತಡವಾಗಲಿದೆ.
ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಹಾಡುಗಳೇ ಸಾಕ್ಷಿ ಒದಗಿಸಿವೆ. ಇದೇ ಕಾರಣದಿಂದ ಸಿನಿಮಾದಲ್ಲಿನ ಬಹುತೇಕ ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯಲ್ಲಿ ತಕರಾರು ವ್ಯಕ್ತವಾಗಿರಬಹುದು. ಹಲವು ದೃಶ್ಯಗಳಲ್ಲಿ ಬದಲಾವಣೆ ಮಾಡಿಕೊಂಡು, ಪುನಃ ಸೆನ್ಸಾರ್ಗೆ ಕಳಿಸಲು ಸೂಚಿಸಲಾಗಿದೆ. ಇದು ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.
ಚಿತ್ರ ಬಿಗ್ ಬಜೆಟ್ನಲ್ಲಿ ಮೂಡಿಬಂದಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಲ್ಲಿ ಜಾನ್ ಅಬ್ರಾಹಂ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ.
ಹಲವು ದೇಶಗಳಲ್ಲಿ ಸಿನಿಮಾದ ದೃಶ್ಯಗಳನ್ನು ಚಿತ್ರಿಸಲಾಗಿದೆ. ಇದು ಶಾರುಖ್ ಖಾನ್ ಅವರ ಕಮ್ಬ್ಯಾಕ್ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
__
Be the first to comment