ಕಾಂತಾರ ಸಿನಿಮಾದ ದೈವದ ವೇಷವನ್ನು ಇಮಿಟೇಟ್ ಮಾಡಿದ ಯುವತಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ತಪ್ಪು ಕಾಣಿಕೆ ಒಪ್ಪಿಸಿದ್ದಾರೆ.
ವಿಡಿಯೋಗೋಸ್ಕರ ದೈವದ ವೇಷ ಧರಿಸಿದ್ದ ಯುವತಿ ದೇವಾಲಯಕ್ಕೆ ಬಂದು ತಪ್ಪು ಕಾಣಿಕೆ ಒಪ್ಪಿಸಿದ್ದು, ದೈವಾರಾಧಕರಲ್ಲೂ ಕ್ಷಮೆ ಕೇಳಿದ್ದಾರೆ.
ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ದೈವಾರಾಧನೆಯನ್ನು ಅಣಕ ಮಾಡಿದ್ದಾರೆ ಎಂದು ನೆಟ್ಟಿಗರು ತೀವ್ರವಾಗಿ ಆರೋಪಿಸಿದ್ದರು. ಯುವತಿ ವಿರುದ್ದ ಮಂಗಳೂರಿನ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಮೌಲ್ಯಯುತವಾದ್ದನ್ನು ಅಪಮೌಲ್ಯಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ವಿರುದ್ದ ದೂರು ದಾಖಲಿಸುವಂತೆ ಒತ್ತಾಯ ಕೇಳಿ ಬಂದಿತ್ತು. ನಂತರ ಯುವತಿ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಅದರೂ ಯುವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ನಿನ್ನೆ ಶ್ವೇತಾ ರೆಡ್ಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಕೇಳಿದ್ದಾರೆ. ಶ್ವೇತಾ ರೆಡ್ಡಿ ತೀರ್ಥ ಸ್ನಾನ ಮಾಡಿ ತಪ್ಪು ಕಾಣಿಕೆ ಒಪ್ಪಿಸಿದ್ದಾರೆ.
ನಾವು ಬೆಂಗಳೂರಿನವರು. ನಮಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಮುಂದೇನೂ ಆಗಬಾರದು ಎಂದು ದೇವಸ್ಥಾನಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ್ದೇವೆ. ನಾವು ದೈವ, ಯಕ್ಷಗಾನ ಎಲ್ಲವೂ ಒಂದೇ ಎಂದು ತಿಳಿದುಕೊಂಡಿದ್ದೆವು ಎಂದು ಹೇಳಿದ್ದಾರೆ.
___





Be the first to comment