ಕಾಂತಾರ ಚಿತ್ರ ಬಿಡುಗಡೆ ಆದ ಬಳಿಕ ದೈವ ನರ್ಕರಿಗೆ ಮಾಶಾಸನ ನೀಡಲು ಸರ್ಕಾರ ಮುಂದಾಗಿದ್ದು, ಇದೇ ಮೊದಲ ಬಾರಿಗೆ ದೈವ ನರ್ತಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕಾಂತಾರ ಸಿನಿಮಾ ಮೂಲಕ ದೈವಗಳ ಸೇವೆ ಮಾಡುತ್ತಾ ಬಂದಿರುವ ಅತ್ಯಂತ ಹಿಂದುಳಿದ ದೈವ ನರ್ತಕರ ಜೀವನ ಹೊರ ಜಗತ್ತಿಗೆ ಬಹಿರಂಗವಾಗಿದೆ. ದೈವಗಳ ಆರಾಧನಾ ಸೇವೆಯನ್ನೇ ಬದುಕಾಗಿಸಿಕೊಂಡ ದೈವ ನರ್ತಕರು ಮುನ್ನೆಲೆಗೆ ಬರುವಂತಾಗಿದೆ. ಈಗ ದೈವ ನರ್ತಕರಾದ ಗುಡ್ಡ ಪಾಣಾರ ಅವರ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ.
ಪಿಲಿಕೋಲದಲ್ಲಿ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಿರುವ ಗುಡ್ಡ ಪಾಣರರಿಗೆ ಜಾನಪದ ವಿಭಾಗದಲ್ಲಿ ಈ ಮನ್ನಣೆ ದೊರಕಿದೆ. 68 ವರ್ಷದ ಗುಡ್ಡ ಪಾಣಾರ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನವರು. ತನ್ನ 25ನೇ ವಯಸ್ಸಿನಿಂದ ದೈವ ನರ್ತಕ ರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಕಾಪುವಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶಿಷ್ಟ ಪಿಲಿಕೋಲದಲ್ಲಿ ಪಿಲಿ ಪಾತ್ರಧಾರಿ ಆಗಿ ಜನರ ಗಮನ ಸೆಳೆದಿದ್ದಾರೆ.
ಕಾಂತರಾ ಸಿನಿಮಾದಲ್ಲಿ ಕಾಣಿಸಿಕೊಂಡ ದೈವಾರಾಧಕ ನಾಗರಾಜ ಪಾಣ ಅವರನ್ನು ಉಡುಪಿ ಜಿಲ್ಲಾಡಳಿತ ಗುರುತಿಸಿದೆ. ಯಾವುದೇ ಅರ್ಜಿ ಹಾಕದೆ ನಾಗರಾಜ ಪಾಣ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಯ ಗೌರವ ಸಿಕ್ಕಿದೆ.
__
Be the first to comment