ಗಂಧದಗುಡಿಗೆ ಸುಧಾ ಮೂರ್ತಿ ಫುಲ್ ಮಾರ್ಕ್ಸ್

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಚಿತ್ರದ ಬಗ್ಗೆ ಇನ್ಫೋಸಿಸ್ ನ ಸುಧಾ ಮೂರ್ತಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ನೋಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾ ಮೂರ್ತಿ ಅವರು, ‘ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಬಂದಿರುವುದು ನೋಡಿ ಗರ್ವ ಬಂತು. ಅವರ ಈ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ’ ಎಂದು ಹೇಳಿದರು.

ಗಂಧದ ಗುಡಿಯಲ್ಲಿ ಯುವಕರು ನೋಡಿ ತಿಳಿದುಕೊಳ‍್ಳಬಹುದಾದ ಸಾಕಷ್ಟು ವಿಷಯಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಪುನೀತ್ ಅವರು ಉತ್ತರ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡಿದಾಗ ನಾನೂ ಭಾವುಕಳಾದೆ. ನಮ್ಮ ನೆಲದ ಚಿತ್ರ ಇದಾಗಿದ್ದರಿಂದ ಹೆಚ್ಚು ಆಪ್ತತೆ ಅನಿಸಿತು ಎಂದು ಸುಧಾಮೂರ್ತಿ ಹೇಳಿದ್ದಾರೆ.

ಗಂಧದ ಗುಡಿ ಡಾಕ್ಯುಡ್ರಾಮಾ ಸಿನಿಮಾ ಇಂದು ಬಿಡುಗಡೆ ಆಗಿದ್ದು ಚಿತ್ರಮಂದಿರಗಳಲ್ಲಿ ಸ್ಪೆಷಲ್ ಶೋದೊಂದಿಗೆ ಪ್ರದರ್ಶನ ಕಂಡಿದೆ. ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರವನ್ನು ಅಭಿಮಾನಿಗಳು ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!