ಕಾಂತಾರ ಸಿನಿಮಾದಲ್ಲಿ ಚಿತ್ರಿಸಲಾಗಿರುವ ದೈವ ಕೋಲ ಹಿಂದೂಗಳ ಸಂಪ್ರದಾಯ ಎಂಬುದು ತಪ್ಪು ಎಂದಿರುವ ನಟ ಚೇತನ್ ಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ತಿರುಗೇಟು ಕೊಟ್ಟಿದ್ದಾರೆ.
ದೈವಾರಾಧನೆ ಮೂಲ ಹಿಂದೂ ಧರ್ಮವಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ ಚೇತನ್ ಈಗಾಗಲೇ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ, ಚೇತನ್ ಆರೋಪಗಳಿಗೆ ಅದಕ್ಕೆ ಸಂಬಂಧಪಟ್ಟವರೇ ಉತ್ತರ ಕೊಡುತ್ತಾರೆ ಎಂದಿದ್ದಾರೆ.
ತೆಲುಗು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಮಾತನಾಡಿದ್ದು, ಚೇತನ್ ಅವರ ಆರೋಪಕ್ಕೆ ನೋ ಕಾಮೆಂಟ್ಸ್ ಎಂದಿದ್ದಾರೆ.
ಅವರ ಆರೋಗ್ಯ ನೋಡಿಕೊಳ್ಳಲಿ ಎಂದು ನಕ್ಕ ರಿಷಬ್ ಬಳಿಕ ‘ನಾನು ಈ ಸಿನಿಮಾ ಮಾಡುವಾಗ ದೈವಾರಾಧನೆ ಮಾಡುವ ಜನರೇ ಜೊತೆಗಿದ್ದರು. ಪ್ರತೀ ಶಾಟ್ ಬಗ್ಗೆ ಅವರನ್ನು ಕೇಳಿಕೊಂಡು ಆ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಈ ಸಿನಿಮಾ ಮಾಡಿದ್ದೇವೆ. ನಾನು ತುಳುನಾಡಿನಿಂದ ಬಂದವನು. ದೈವಾರಾಧನೆ ಎಲ್ಲವನ್ನೂ ಚಿಕ್ಕ ವಯಸ್ಸಿನಿಂದಲೇ ನೋಡಿದವನು.ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ಸಾಕಷ್ಟು ಬೆವರು ಸುರಿಸಿ ಈ ಸಿನಿಮಾಕ್ಕೆ ಕೆಲಸ ಮಾಡಿದ್ದೇನೆ. ಸಿನಿಮಾ ಮಾಡುವುದು ನನ್ನ ಕೆಲಸ ಎಂದಿದ್ದಾರೆ.
ಕಾಂತಾರ ಚಿತ್ರ ಕನ್ನಡ ಅಲ್ಲದೇ ಹಿಂದಿ, ಇತರ ಭಾಷೆಗಳಲ್ಲಿ ಕ್ರೇಜ್ ಹುಟ್ಟಿಸಿದೆ.
Be the first to comment