ಇಂದು ‘ಕಂಬ್ಳಿಹುಳ’ ಟ್ರೈಲರ್ ರಿಲೀಸ್

ನವನ್ ಶ್ರೀನಿವಾಸ್ ನಿರ್ದೇಶನದ ‘ಕಂಬ್ಳಿಹುಳ’ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ.

ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ಕುತೂಹಲ ಮೂಡಿಸಿದೆ.

ಫ್ಯಾಮಿಲಿ ಎಂಟರ್ ಟೇನರ್ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ಟೈಟಲ್ ನಿಂದಲೇ ಸಾಕಷ್ಟು ಸದ್ದು ಮಾಡಿದೆ.

ಈ ಚಿತ್ರದಲ್ಲಿ ಅಂಜನ್ ಹಾಗೂ ಅಶ್ವಿತಾ ಮುಖ್ಯಭೂಮಿಕೆಯಲ್ಲಿದ್ದಾರೆ. ದೀಪಕ್ ರೈ ಪಣಜೆ, ರೋಹಿತ್ ಕುಮಾರ್ ಸೇರಿದಂತೆ ಮೊದಲಾದ ಕಲಾವಿದರು ನಟಿಸಿದ್ದಾರೆ.

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ಪುನೀತ್, ಸವೀನ್ ವಿಜಯ್ ಹಾಗೂ ಗುರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಿವಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!