ಕಾಂತಾರ ಬಗ್ಗೆ ಸುದೀಪ್ ಮೆಚ್ಚುಗೆ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂತಾರ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಸಿಂಪಲ್ ಪ್ಲಾಟ್, ಅಸಾಧಾರಣ ರೀತಿಯಲ್ಲಿ ಬರೆದ, ಫೆಂಟಾಸ್ಟಿಕ್ ಆಗಿ ಚಿತ್ರಣಮಾಡಲಾಗಿದೆ ಎಂದು ಸುದೀಪ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾನು ಚೆನ್ನಾಗಿರುವ ಮತ್ತು ಫೆಂಟಾಸ್ಟಿಕ್ ಎನಿಸುವ ಸಿನಿಮಾಗಳನ್ನು ನೋಡುತ್ತೇವೆ. ಆದರೆ ಅಪರೂಪಕ್ಕೆ ನಮ್ಮನ್ನು ಮಂತ್ರಮುಗ್ಧಗೊಳಿಸುವ ಸಿನಿಮಾ ನೋಡುತ್ತೇವೆ. ಅಂತಹ ಒಂದು ಸಿನಿಮಾ ಕಾಂತಾರದಲ್ಲಿ ರಿಷಬ್ ಫ್ಯಾಬುಲಸ್ ಆಗಿ ನಟಿಸಿದ್ದು ಸಂಪೂರ್ಣ ಶ್ರಮ ಹಾಕಿದ್ದಾರೆ. ಸುಮ್ಮನೆ ಆರಾಮವಾಗಿ ಕುಳಿತು ಅಚ್ಚರಿಪಟ್ಟು ವ್ಯಕ್ತಿಯೊಬ್ಬರು ಈ ರೀತಿಯಾಗಿ ಏನಾದರೂ ಹೇಗೆ ಯೋಚಿಸಲು ಸಾಧ್ಯ ಎಂದು ಯೋಚಿಸುವುದಷ್ಟೇ ನಿಮ್ಮ ಕೆಲಸ ಎಂದು ಸುದೀಪ್ ಹೇಳಿದ್ದಾರೆ.

ನಿರ್ದೇಶಕ ಕಲ್ಪಿಸಿಕೊಂಡಂತೆ ಸಿನಿಮಾ ಸಿದ್ಧವಾಗಿದೆ. ಅವರ ದೃಷ್ಟಿಕೋನದಲ್ಲಿ ಕಂಡಂತೆ ಸಿನಿಮಾ ಬಂದಿದೆ. ಇದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ಸೂಪರ್ ಹಿಟ್ ಎನಿಸಿದೆ. ಸಪ್ತಮಿ ಗೌಡ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!