ಬನಾರಸ್ ಚಿತ್ರದ ಕೇರಳದ ವಿತರಣಾ ಹಕ್ಕು ಪ್ರತಿಷ್ಠಿತ ಸಂಸ್ಥೆಯಾಗಿರುವ ಮುಲಕುಪ್ಪಡಮ್ ಖರೀದಿಸಿದೆ.
ಉತ್ತಮ ಗುಣಮಟ್ಟದ ಚಿತ್ರಗಳನ್ನ ಮಾತ್ರ ಖರೀದಿಸಿ, ವಿತರಿಸಿರುವ ಈ ಸಂಸ್ಥೆ ಖುದ್ದು ಚಿತ್ರ ನೋಡಿ ಬನಾರಸ್ ಮೆಚ್ಚಿ ವಿತರಣೆಗೆ ಮುಂದಾಗಿದೆ.
ಜಯತೀರ್ಥ ನಿರ್ದೇಶನದ ಬನಾರಸ್ ಕನ್ನಡ ಸೇರಿ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿದೆ. ಈಗಾಗಲೇ ಸ್ಟಿಲ್ಸ್,ಮೋಷನ್ ಪೋಸ್ಟರ್,ಟ್ರೈಲರ್, ಹಾಡುಗಳ ಮೂಲಕ ಚಿತ್ರ ಗಮನ ಸೆಳೆದಿದೆ.
ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಮೋಷನ್ ಪೋಸ್ಟರ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರ ಕನ್ನಡ ಸೇರಿದಂತೆ ಮಲಯಾಳಂ ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.
ನಾಯಕನಾಗಿ ಝೈದ್ ಖಾನ್, ನಾಯಕಿಯಾಗಿ ಸೋನಲ್ ಮೊಂತೆರಿಯೋ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸ್ವಪ್ನಾ ಮುಂತಾದವರು ನಟಿಸಿದ್ದಾರೆ.
ಬನಾರಸ್ ಗೆ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಇದೆ. ಇದೇ ನವೆಂಬರ್ 4 ರಂದು ಚಿತ್ರ ಬಿಡುಗಡೆ ಆಗಲಿದೆ.
___






Be the first to comment