‘ಕಾಂತಾರ’ ಪ್ರೀಮಿಯರ್ ಶೋ

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ಸೆ.30ಕ್ಕೆ ತೆರೆಗೆ ಬರುತ್ತಿದ್ದು, ಒಂದು ದಿನ ಮೊದಲೇ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ.

ಸೆ.29ರಂದು ಕಾಸರಗೋಡು, ಹೈದರಾಬಾದ್‌, ಚೆನ್ನೈ, ಕೊಚ್ಚಿಯಲ್ಲಿ ‘ಕಾಂತಾರ’ ಚಿತ್ರದ ಪ್ರಿಮಿಯರ್‌ ಶೋ ನಡೆಯಲಿದೆ. ಕನ್ನಡ ಸಿನಿಮಾವೊಂದು ಬಿಡುಗಡೆಗೂ ಮೊದಲೇ ಕಾಸರಗೋಡಿನಲ್ಲಿ ಪ್ರಿಮಿಯರ್‌ ಶೋ ಕಾಣುತ್ತಿರುವುದು ಇದೇ ಮೊದಲು ಆಗಿದೆ.

ಪ್ರಿಮಿಯರ್‌ ಶೋಗಳ ಜತೆಗೆ ಪೇಯ್ಡ್‌ ಪ್ರಿಮಿಯರ್‌ ಶೋಗಳನ್ನು ಆಯೋಜಿಸಲಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಮಂಗಳೂರು, ಕುಂದಾಪುರ ಮುಂತಾದ ಕಡೆ ಪೇಯ್ಡ್‌ ಪ್ರಿಮಿಯರ್‌ ಶೋಗಳ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.

ಈಗಾಗಲೇ ಈ ಶೋಗಳ ಟಿಕೆಟ್‌ಗಳು ಶೇ.60ರಷ್ಟುಮಾರಾಟ ಆಗಿವೆ. ಮಲ್ಟಿಪ್ಲೆಕ್ಸ್‌ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲೂ ಈಗಾಗಲೇ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ.

ಬೆಂಗಳೂರಿನ ಶಾಪಿಂಗ್‌ ಮಾಲ್‌ಗಳು, ರಾಜ್ಯದ ಹೈವೇ ರಸ್ತೆಗಳ ಪಕ್ಕ 150ಕ್ಕೂ ಬೃಹತ್‌ ಕಟೌಟ್‌ಗಳನ್ನು ಹಾಕಿ ಹೊಂಬಾಳೆ ಫಿಲಮ್ಸ್‌ ನಿರ್ಮಾಣದ ಚಿತ್ರಕ್ಕೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ.

ಚಿತ್ರದಲ್ಲಿ ಕಿಶೋರ್‌, ಅಚ್ಯುತ್‌ ಕುಮಾರ್‌, ಸಪ್ತಮಿಗೌಡ ಮುಂತಾದವರು ನಟಿಸಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!