ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಮುಂದಿನ ಚಿತ್ರಕ್ಕೆ ರೆಮೋ ಇಶಾನ್ ನಾಯಕ.

ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿ ಚಿತ್ರಗಳ ಚಿತ್ರೀಕರಣ ಭರ್ಜರಿಯಾಗಿ ಆರಂಭವಾಗುತ್ತಿದೆ. ಆ ಸಾಲಿನಲ್ಲಿ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ “ಜೇಮ್ಸ್”. ಈ ಚಿತ್ರವನ್ನು ನಿರ್ದೇಶಿಸಿದ ಚೇತನ್ ಕುಮಾರ್ ಈಗ ಮತ್ತೊಂದು ಚಿತ್ರವನ್ನು ಆರಂಭಿಸಿದ್ದಾರೆ. ಆ್ಯಕ್ಷನ್ ಹಾಗೂ ಭರ್ಜರಿ ಮಾಸ್ ಎಲಿಮೆಂಟ್ಸ್ ಗಳೊಂದಿಗೆ ಜೇಮ್ಸ್ ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಮತ್ತೊಂದು ಅದ್ಧೂರಿ ಚಿತ್ರವನ್ನು ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ ಚೇತನ್ ಕುಮಾರ್.

ತನ್ನ ಸ್ಮಾರ್ಟ್ ಲುಕ್ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಮುಂದಾಗಿರುವಂತ ಯುವ ನಟ ಇಶಾನ್ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಇಶಾನ್ ಅಭಿನಯದ “ರೆಮೋ” ಚಿತ್ರದ ಹಾಡುಗಳು, ಟೀಸರ್ ಎಲ್ಲರ ಗಮನ ಸೆಳೆದಿದೆ. ಸದ್ಯ “ರೆಮೋ” ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರ ಹೊರಬಂದ ನಂತರ ನಿರ್ದೇಶಕ ಚೇತನ್ ಕುಮಾರ್ ಹಾಗೂ ಯುವ ನಟ ಇಶಾನ್ ಕಾಂಬಿನೇಷನ್ ಆರಂಭವಾಗಲಿದ್ದು, ನೂತನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಂಡ ನೀಡಲಿದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!