ಕಿಚ್ಚ ಮತ್ತು ಅಜಯ್ ದೇವಗನ್ ನಡುವೆ ಬಾಕ್ಸಾಫೀಸ್ ವಾರ್ ನಿಂದ ಅಜಯ್ ದೇವಗನ್ ಹಿಂದೆ ಸರಿದಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ರಿಲೀಸ್ ಮಾಡುವುದಾಗಿ ಸಿನಿಮಾ ತಂಡ ಹೇಳಿದೆ. ಒಂದು ದಿನ ತಡವಾಗಿ ಜುಲೈ 29ಕ್ಕೆ ಅಜಯ್ ದೇವಗನ್ ಅಭಿನಯದ ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಳ್ಳಲಾಗಿತ್ತು. ಸುದೀಪ್ ‘ವಿಕ್ರಾಂತ್ ರೋಣ’ ಮತ್ತು ‘ಥ್ಯಾಂಕ್ ಗಾಡ್’ ಸಿನಿಮಾ ಬಾಕ್ಸಫೀಸ್ನಲ್ಲಿ ಮುಖಾ ಮುಖಿ ಆಗಲಿವೆ ಎನ್ನಲಾಗಿತ್ತು. ಆದರೆ ಅಜಯ್ ದೇವಗನ್ ಚಿತ್ರ ಬಿಡುಗಡೆ ಈಗ ಮುಂದಕ್ಕೆ ಹೋಗಿದೆ.
‘ವಿಕ್ರಾಂತ್ ರೋಣ’ ಹಿಂದಿಯಲ್ಲೂ ತೆರೆಗೆ ಬರುತ್ತಾ ಇರುವುದರಿಂದ ದೇವಗನ್ ಚಿತ್ರ ವಿಕ್ರಾಂತ್ ರೋಣನ ಜೊತೆಗೆ ತೆರೆಗೆ ಬರುವುದು ಉತ್ತಮ ನಿರ್ಧಾರ ಅಲ್ಲ ಎಂದು ಹೇಳಲಾಗುತ್ತಿತ್ತು. ಈಗ ಸಿನಿಮಾ ಮುಂದಕ್ಕೆ ಹೋಗಿದೆ. ಚಿತ್ರದ ವಿಎಫ್ಎಕ್ಸ್ ಕೆಲಸಗಳು ತಡವಾಗುತ್ತಾ ಇವೆ ಎಂದು ಚಿತ್ರತಂಡ ತಿಳಿಸಿದೆ.
ವಿಕ್ರಾಂತ್ ರೋಣ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಇದು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹಿಂದಿ ಬಾಕ್ಸಾಫೀಸ್ ಚಿಂದಿ ಮಾಡುವ ಲಕ್ಷಣಗಳು ಇವೆ. ‘ವಿಕ್ರಾಂ ರೋಣ’ ಸಿನಿಮಾ ಜೊತೆ ರಿಲೀಸ್ ಬೇಡ ಎಂದು ಅಜಯ್ ದೇವಗನ್ ಸಿನಿಮಾ ರಿಲೀಸ್ನಿಂದ ಹಿಂದೆ ಸರಿದಿದೆ ಎಂದು ಹೇಳಲಾಗಿದೆ.
ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಹಿಂದಿ ರಾಷ್ಟ್ರ ಭಾಷೆಯ ವಿಚಾರದಲ್ಲಿ ಸಾಕಷ್ಟು ಟ್ವೀಟ್ ವಿನಿಮಯ ನಡೆದು ಸುದ್ದಿಯಾಗಿತ್ತು.
___






Be the first to comment