KGF Chapter 2 : ಕೆಜಿಎಫ್ ನ್ಯೂಕ್ಲಿಯರ್ ದಾಳಿ ಮಾಡಿದಂತಿದೆ : ವರ್ಮಾ

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರ ಬರೀ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ. ಅದು ಬಾಲಿವುಡ್ ಇಂಡಸ್ಟ್ರಿ ಪಾಲಿಗೆ ಹಾರರ್ ಚಿತ್ರವಾಗಿದೆ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಈ ಸಿನಿಮಾದ ಯಶಸ್ಸು ಬಾಲಿವುಡ್‌ ಮಂದಿಗೆ ಅನೇಕ ವರ್ಷಗಳ ಕಾಲ ಕಾಡುತ್ತದೆ. ಸಿನಿಮಾದಲ್ಲಿ ಹೇಗೆ ರಾಕಿ ಭಾಯ್ ಮುಂಬೈಗೆ ಬಂದು ಮಷಿನ್ ಗನ್‌ನಲ್ಲಿ ವಿಲನ್‌ಗಳನ್ನು ಹೊಡೆದುರುಳಿಸುತ್ತಾರೋ ಅದೇ ರೀತಿ ನಟ ಯಶ್ ಬಾಕ್ಸ್‌ ಆಫೀಸ್‌ ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್‌ ಸ್ಟಾರ್‌ಗಳನ್ನ ಮಷಿನ್ ಗನ್ ಮೂಲಕ ಹೊಡೆದುರುಳಿಸಿದ್ದಾರೆ. ಕೆಜಿಎಫ್ 2 ಸಿನಿಮಾದ ಫೈನಲ್ ಕಲೆಕ್ಷನ್ ಬಾಲಿವುಡ್‌ ಮೇಲೆ ಸ್ಯಾಂಡಲ್‌ವುಡ್ ನ್ಯೂಕ್ಲಿಯರ್ ದಾಳಿ ಮಾಡಿದ ಹಾಗಿರುತ್ತದೆ ಎಂದು ನೇರವಾಗಿ ಬಾಲಿವುಡ್​ಗೆ ಹೇಳಿದ್ದಾರೆ.

ಹಿಂದಿ ಚಿತ್ರರಂಗ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಚಿತ್ರರಂಗ ಕೂಡ ಕನ್ನಡ ಚಿತ್ರರಂಗವನ್ನು ಕೆಜಿಎಫ್ ಬರುವವರೆಗೂ ಸೀರಿಯಸ್‌ ಆಗಿ ಪರಿಗಣಿಸಿರಲಿಲ್ಲ. ಈಗ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗವನ್ನು ವರ್ಲ್ಡ್‌ ಮ್ಯಾಪ್‌ನಲ್ಲಿ ಹಾಕಿದ್ದಾರೆ ಎಂದು ಹೊಗಳಿದ್ದಾರೆ.

ಸ್ಟಾರ್‌ಗಳ ಸಂಭಾವನೆಗೆ ದುಡ್ಡು ಹಾಕುವ ಬದಲು ಮೇಕಿಂಗ್‌ ಮೇಲೆ ಹಣ ಖರ್ಚು ಮಾಡಿದರೆ ಅತ್ಯುತ್ತಮ ಕ್ವಾಲಿಟಿಯ ಸಿನಿಮಾ, ದೊಡ್ಡ ಮಟ್ಟದ ಹಿಟ್ಸ್ ಕೊಡಲು ಸಾಧ್ಯ ಎಂಬುದನ್ನು ಕನ್ನಡದ ಕೆಜಿಎಫ್ 2 ಸಿನಿಮಾ ತನ್ನ ಯಶಸ್ಸಿನಿಂದ ಸಾಬೀತು ಪಡಿಸಿದೆ ಎಂದು ವರ್ಮಾ ಕೆಜೆಎಫ್ 2 ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ 20ಮೊದಲ ದಿನ 135.5 ಕೋಟಿ ಕಲೆಕ್ಷನ್ ಮಾಡಿದರೆ, 2ನೇ ದಿನ ಒಟ್ಟು 240 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ. ಚಿತ್ರದ ಬಗ್ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!