ಪಾರಿಜಾತ ಚಿತ್ರದ ನಾಯಕ ನಟ ಯಶ್ ಶೆಟ್ಟಿ

ಅಸುರನ ಕೈಯಲ್ಲಿ ಪಾರಿಜಾತ ಚಿತ್ರದ ನಾಯಕ ನಟನಾಗಿ ಯಶ್ ಶೆಟ್ಟಿ ಆಯ್ಕೆ ಆಗಿದ್ದಾರೆ.

ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಮೋದ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಶರ್ಮ ಪಾತ್ರದಲ್ಲಿ ಪ್ರಬಿಕ್ ಮೊಗವೀರ್ ನಟಿಸುತ್ತಿದ್ದಾರೆ.

ಈ ಚಿತ್ರ ಪ್ರಬಿಕ್ ಮೊಗವೀರ್ ನಿರ್ಮಾಣದ 5 ನೇ ಚಿತ್ರ ಆಗಿದೆ. ಸುರರು ಮತ್ತು ಅಸುರರ ನಡುವಿನ ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ 5 ಕಲ್ಪವೃಕ್ಷಗಳಲ್ಲಿ ಇದೂ ಒಂದು. ನಂತರ ಇಂದ್ರನ ನಂದನವನದಲ್ಲಿ ಪಲ್ಲವಿಸಿತು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಇತಿಹಾಸವಿದೆ. ಅಂದು ಪಾರಿಜಾತ ಸುರರ ಕೈಯಲ್ಲಿ , ಇಂದು ಅದೇ ಪಾರಿಜಾತ ಅಸುರರ ಕೈಯಲ್ಲಿ ಎನ್ನುವ ಪರಿಕಲ್ಪನೆಯೊಂದಿಗೆ ಚಿತ್ರತಂಡ ಸಿನಿಮಾವನ್ನು ರೂಪಿಸುತ್ತಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!