90 ದಿನದ ಬಳಿಕ ಒಟಿಟಿಯಲ್ಲಿ RRR

ರಾಜಮೌಳಿ ನಿರ್ದೇಶನದ RRR ಸಿನಿಮಾ ಸೂಪರ್ ಹಿಟ್ ಆಗಿದ್ದು, ಒಟಿಟಿ ಪ್ರಿಯರು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

‘RRR’ ಸಿನಿಮಾದ ಒಟಿಟಿ ರೈಟ್ಸ್ ಈ ಹಿಂದೆಯೇ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ನೆಟ್‌ಫ್ಲಿಕ್ಸ್‌ ನವರು ‘RRR’ ಸಿನಿಮಾದ ಒಟಿಟಿ ರೈಟ್ಸ್ ಪಡೆದುಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ‘RRR’ ಸಿನಿಮಾ ಬರೋದು ಪಕ್ಕಾ ಆಗಿದ್ದು, ಸದ್ಯಕ್ಕೆ ನೆಟ್‌ಫ್ಲಿಕ್ಸ್‌ನವರು ‘RRR’ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಲ್ಲ.

ಈ ಹಿಂದೆಯೇ ಚಿತ್ರತಂಡ ಮತ್ತು ನೆಟ್‌ಫ್ಲಿಕ್ಸ್ ಒಪ್ಪಂದ ಮಾಡಿಕೊಂಡಿವೆ. ‘RRR’ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿ 90 ದಿನಗಳ ನಂತರ ಒಟಿಟಿಗೆ ಬರಲಿದೆ. ಅಲ್ಲಿವರೆಗೆ ಒಟಿಟಿ ಪ್ರಿಯರು ಕಾಯಬೇಕಿದೆ.
RRR ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಬಾಕ್ಸ್ಆಫೀಸ್‌ನಲ್ಲಿ RRR ಮೊದಲ ದಿನ ದೊಡ್ಡ ದಾಖಲೆ ಬರೆದಿದೆ. ಚಿತ್ರ ಮೊದಲ ದಿನವೇ 200 ಕೋಟಿಯ ಗಡಿ ದಾಟಿದೆ. ವಿಶ್ವಾದ್ಯಂತ RRR ಮೊದಲ ದಿನದ ಬಾಕ್ಸಾಫೀಸ್ ಗಳಿಕೆ 260 ಕೋಟಿ ಆಗಿದೆ ಎಂದು ಅಂದಾಜಿಸಲಾಗಿದೆ.

ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ನಡುವೆ ಚಿತ್ರ ಪೈರೇಟ್ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ ದೃಶ್ಯ ವೈಭವದಿಂದ ಕೂಡಿದ ಈ ಚಿತ್ರವನ್ನು ಪೈರೇಟ್ ಆಗಿ ನೋಡಿದರೆ ಮಜಾ ಸಿಗದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ.
_______

Be the first to comment

Leave a Reply

Your email address will not be published. Required fields are marked *

Translate »
error: Content is protected !!